ಅನ್ನ ಉದುರು ಉದುರಾಗಿ ಬರಲು ಟಿಪ್ಸ್

ಅನ್ನ ಬೇಯಿಸುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಮುದ್ದೆಯಂತಾಗಿ ತಿನ್ನಲು ರುಚಿಯಾಗಿರುವುದಿಲ್ಲ. ಅನ್ನದ ರುಚಿ, ಸ್ವಾದ ಹಾಗೆಯೇ ಇರಬೇಕೆಂದರೆ ಉದುರು ಉದುರಾಗಿರಬೇಕು. ಅನ್ನ ಉದುರು ಉದುರಾಗಿರಬೇಕೆಂದರೆ ಏನು ಮಾಡಬೇಕು

Photo Credit: Social Media

ಊಟ ಮಾಡಲು ಅಥವಾ ಚಿತ್ರಾನ್ನದಂತಹ ತಿಂಡಿ ತಯಾರಿಸಲು ಅನ್ನ ಉದುರಾಗಿದ್ದರೆ ಉತ್ತಮ

ಅಕ್ಕಿ ಬೇಯಿಸುವಾಗ ಅಗತ್ಯಕ್ಕಿಂತ ಹೆಚ್ಚು ನೀರು ಹಾಕಿ ಬೇಯಿಸಿದರೆ ಅನ್ನ ಗಂಜಿಯಂತಾಗಬಹುದು

ಕುಕ್ಕರ್ ನಲ್ಲಿ ಅನ್ನಕ್ಕಿಡುವಾಗ ಅದರ ಮುಚ್ಚಳ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ

ಅನ್ನ ಬೇಯಿಸಲು ಇಡುವಾಗ ಅದಕ್ಕೆ ಎರಡೇ ಹನಿ ಕೊಬ್ಬರಿ ಎಣ್ಣೆಯನ್ನು ಬಳಸಿ ಬೇಯಿಸಿ

ಕುಕ್ಕರ್ ನಲ್ಲಿಡುವುದಾದರೆ ಅಗತ್ಯಕ್ಕಿಂತ ಹೆಚ್ಚು ವಿಷಲ್ ಹಾಕಿಸಿದರೆ ಮುದ್ದೆಯಾಗಬಹುದು

ಅನ್ನ ಮಾಡುವಾಗ ಉರಿ ಹೆಚ್ಚು ಮಾಡದೇ ಮಧ್ಯಮ ಉರಿಯಲ್ಲಿರುವಂತೆ ನೋಡಿಕೊಳ್ಳಿ

ಒಂದು ವೇಳೆ ಪಾತ್ರೆಯಲ್ಲಿ ಅನ್ನ ಮಾಡುವುದಿದ್ದರೆ ಬೆಂದ ತಕ್ಷಣ ಬಿಸಿಯಾಗೇ ಗಂಜಿ ಬಸಿದುಕೊಂಡು ಹರಡಿಡಿ