ಅಸಿಡಿಟಿಗೆ ತಕ್ಷಣ ಪರಿಹಾರ ನೀಡಲು ಮನೆ ಮದ್ದು

ಇತ್ತೀಚೆಗಿನ ದಿನಗಳಲ್ಲಿ ನಮ್ಮ ಆಹಾರ ಶೈಲಿಯಿಂದಾಗಿ ಬಹುತೇಕರು ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಆದರೆ ಅಸಿಡಿಟಿಯಾದಾಗ ಕಿರಿ ಕಿರಿಯಿಂದ ತಕ್ಷಣ ಪರಿಹಾರ ನೀಡಲು ಏನು ಮಾಡಬೇಕು ನೋಡೋಣ.

credit: social media

ದೇಹ ತಂಪಗಾಗಿಸುವ ಅಲ್ಯುವೀರಾ ಜ್ಯೂಸನ್ನು ನಿಯಮಿತವಾಗಿ ಸೇವಿಸುತ್ತಿರಿ

ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಜಗಿಯುತ್ತಿದ್ದರೆ ಸಾಕು

ಊಟದ ಬಳಿಕ ಕೆಲವು ಸೋಂಪು ಕಾಳನ್ನು ಬಾಯಿಗೆ ಹಾಕಿಕೊಂಡರೆ ಜೀರ್ಣಕ್ರಿಯೆ ಸುಗಮವಾಗುತ್ತದೆ

ಪ್ರತಿನಿತ್ಯ ರಾತ್ರಿ ನೆನೆಹಾಕಿದ ಕೊತ್ತಂಬರಿ ನೀರನ್ನು ಬೆಳಿಗ್ಗೆ ಸೇವನೆ ಮಾಡುವುದು ಉತ್ತಮ

ದೇಹಕ್ಕೆ ತಂಪು ಜೊತೆಗೆ ಅಸಿಡಿಕ್ ಅಂಶವನ್ನು ಹೊರಹಾಕುವ ಶಕ್ತಿ ಎಳೆನೀರಿಗಿದೆ.

ಅಸಿಡಿಟಿಯಾಗಿ ಪದೇ ಪದೇ ಹುಳಿಗೇತು ಅಥವಾ ಎದೆ ಉರಿ ಆಗುತ್ತಿದ್ದರೆ ಶುಂಠಿ ಜಗಿಯಿರಿ.

ಜೀರಿಗೆ ಕಾಳನ್ನು ಹಾಗೆಯೇ ಸೇವಿಸುವುದು ಅಥವಾ ಕಷಾಯ ಮಾಡಿ ಸೇವಿಸಬಹುದು