ಬೀಜ ಬಳಸದೇ ಕೊತ್ತಂಬರಿ ಸೊಪ್ಪಿನ ಗಿಡ ಬೆಳೆಯಲು ಟಿಪ್ಸ್

ಮನೆಯ ಮುಂದೆ ಪಾಟ್ ನಲ್ಲೇ ಕೊತ್ತಂಬರಿ ಸೊಪ್ಪು ಬೆಳೆಯಲು ಧನಿಯಾ ಬೀಜವೇ ಬೇಕೆಂದೇನಿಲ್ಲ. ಬೀಜ ಬಳಸದೇ ಕೊತ್ತಂಬರಿ ಸೊಪ್ಪಿನಿಂದಲೇ ಗಿಡ ಮಾಡುವುದು ಹೇಗೆ ನೋಡಿ.

Photo Credit: Instagram

ಸಾಮಾನ್ಯವಾಗಿ ಬೀಜಗಳನ್ನು ಜಜ್ಜಿ ಗಿಡ ಮಾಡುತ್ತೇವೆ

ಬೇರು ಸಹಿತವಿರುವ ಬಲಿತ ಸೊಪ್ಪು ತಂದರೆ ಅದರಿಂದ ಗಿಡ ಮಾಡಬಹುದು

ಕೊತ್ತಂಬರಿ ಸೊಪ್ಪಿನ ಮೇಲ್ಭಾಗವನ್ನು ಕತ್ತರಿಸಿ

ಈಗ ಬೇರಿನ ಭಾಗವನ್ನು ತುದಿ ಭಾಗದಲ್ಲಿ ಅಡ್ಡಲಾಗಿ ಕತ್ತರಿಸಿ

ಕಪ್ಪು ಮಣ್ಣಿರುವ ಪಾಟ್ ನಲ್ಲಿ ಈ ಬೇರನ್ನು ನೆಡಿ

ಇದಕ್ಕೆ ನೀರು ಹಾಕುತ್ತಿದ್ದರೆ ಒಂದು ವಾರದಲ್ಲಿ ಗಿಡ ಚಿಗುರು ಬರುತ್ತದೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.