ಶುಂಠಿ ಪಾಟ್ ನಲ್ಲಿ ಬೆಳೆಯುವುದು ಹೇಗೆ

ಮನೆಗೆ ಬಳಕೆಗೆ ತಕ್ಕ ತರಕಾರಿಗಳು ನಮ್ಮ ಹಿತ್ತಲಲ್ಲೇ ಇದ್ದರೆ ಚೆನ್ನಾಗಿರುತ್ತದೆ ಅಲ್ವಾ? ಅದೇ ರೀತಿ ದಿನನಿತ್ಯ ಬಳಸುವ ಶುಂಠಿಯನ್ನು ಮನೆಯಲ್ಲಿ ಪಾಟ್ ನಲ್ಲೇ ಬೆಳೆಸಬಹುದು. ಅದು ಹೇಗೆ ಎಂದು ಇಲ್ಲಿ ನೋಡಿ.

Photo Credit: Facebook, AI image

ಒಂದು ದಪ್ಪಗಿರುವ ಮೊಳಕೆ ಬರಲು ಆರಂಭವಾದ ಶುಂಠಿಯ ತುಂಡನ್ನು ತೆಗೆದುಕೊಳ್ಳಿ

ಶುಂಠಿ ಬೆಳೆಯಲು ನೆಲದಲ್ಲಿ ವಿಶಾಲ ಜಾಗವೇ ಬೇಕೆಂದೇನಿಲ್ಲ ಪಾಟ್ ನಲ್ಲೂ ಬೆಳೆಯಬಹುದು

ಅಗಲವಾದ ಪಾಟ್ ಒಂದನ್ನು ತೆಗೆದುಕೊಂಡು ಕೆಳಗೆ ನೀರು ಹೋಗಲು ತೂತು ಮಾಡಿಕೊಳ್ಳಿ

ಈಗ ಇದಕ್ಕೆ ಶೇ.70 ರಷ್ಟು ಕಂಪೋಸ್ಟ್ ಗೊಬ್ಬರ ಮತ್ತು 30% ಮಣ್ಣು ಹಾಕಿ ಮಿಕ್ಸ್ ಮಾಡಿ

ಈಗ ಮಣ್ಣಿನಲ್ಲಿ ಎರಡು ಇಂಚುಗಳಷ್ಟು ಕೆಳಗೆ ಮೊಳಕೆ ಬಂದ ಶುಂಠಿ ಹಾಕಿ

ಬಳಿಕ ಹಗುರವಾಗಿ ಬಿಸಿಲು ಬರುವ ಕಡೆ ಪಾಟ್ ನ್ನಿಡಿ ಅತಿಯಾಗಿ ನೀರು ಹಾಕಬೇಡಿ

ಮೊಳಕೆ ಬಂದು ಆರರಿಂದ ಏಳು ವಾರಗಳ ನಂತರ ಎಲೆ ಹಳದಿಗಟ್ಟಿದ ಮೇಲೆ ಶುಂಠಿ ಬೆಳೆಯಾಗಿದೆ ಎಂದರ್ಥ