ಸುಲಭವಾಗಿ ಪುದೀನಾ ಸೊಪ್ಪು ಬೆಳೆಯಲು ಟಿಪ್ಸ್

ದೈನಂದಿನ ಅಗತ್ಯಕ್ಕೆ ಬೇಕಾಗುವ ವಸ್ತುಗಳನ್ನು ನಾವು ಮನೆಯಲ್ಲಿಯೇ ಪಾಟ್ ನಲ್ಲಿ ಬೆಳೆಯಬಹುದು. ಅದೇ ರೀತಿ ಪುದೀನಾ ಸೊಪ್ಪನ್ನೂ ಮನೆಯಲ್ಲಿಯೇ ಬೆಳೆಯಬಹುದು. ಮಾರುಕಟ್ಟೆಯಿಂದ ತಂದ ಪುದೀನಾ ಸೊಪ್ಪನ್ನು ಪಾಟ್ ನಲ್ಲಿ ಬೆಳೆಯಲು ಟಿಪ್ಸ್ ಇಲ್ಲಿದೆ.

Photo Credit: Instagram, AI image

ಮಾರುಕಟ್ಟೆಯಿಂದ ತಂದ ಪುದೀನಾ ಸೊಪ್ಪಿನ ದಪ್ಪ ದಂಟನ್ನು ತೆಗೆದಿಟ್ಟುಕೊಳ್ಳಿ

ತುದಿಯಲ್ಲಿ ಚಿಗುರೆಲೆ ಮಾತ್ರ ಇರುವಂತೆ ದಪ್ಪಗಿರುವ ದಂಟನ್ನು ರೆಡಿ ಮಾಡಿಟ್ಟುಕೊಳ್ಳಿ

ಒಂದು ಪಾಟ್ ನಲ್ಲಿ ನೀವು ಸಾಮಾನ್ಯವಾಗಿ ಬಳಸುವ ಮಣ್ಣು ಹಾಕಿ ರೆಡಿ ಮಾಡಿ

ಪಾಟ್ ನಲ್ಲಿರುವ ಮಣ್ಣು ನೆಡುವ ಮೊದಲು ಸಡಿಲವಾಗಿರುವಂತೆ ನೋಡಿಕೊಳ್ಳಿ

ಸ್ವಲ್ಪ ಅಗಲವಾದ ಪಾಟ್ ನಲ್ಲಿ ಗಿಡ ನೆಟ್ಟರೆ ಪುದೀನಾ ಚೆನ್ನಾಗಿ ಬರುತ್ತದೆ

ಈಗ ರೆಡಿ ಮಾಡಿಕೊಂಡ ದಪ್ಪ ದಂಟನ್ನು ಮಣ್ಣು ಸ್ವಲ್ಪ ಕೆದಕಿ ನೆಟ್ಟು ಮಣ್ಣು ಮುಚ್ಚಿ

ಇದನ್ನು ಹೆಚ್ಚು ಬಿಸಿಲು ಬೀಳದ ಕಡೆ ನಿತ್ಯವೂ ನೀರು ಹಾಕುತ್ತಾ ಬಂದರೆ ಎರಡು ವಾರದಲ್ಲಿ ಸೊಪ್ಪು ಬರುತ್ತದೆ