ಬೇಸಿಗೆಯಲ್ಲಿ ಜೀರ್ಣಕ್ರಿಯೆ ಹೆಚ್ಚಿಸಲು ಟಿಪ್ಸ್

ಬೇಸಿಗೆ ಬಂತೆಂದರೆ ಯಾವ ಆಹಾರವೂ ತಿನ್ನಬೇಕೆನಿಸುವುದಿಲ್ಲ. ಬಾಯಾರಿಕೆಯೇ ಹೆಚ್ಚಾಗುತ್ತದೆ. ಆದರೆ ಬೇಸಿಗೆಯಲ್ಲಿ ನಿಮ್ಮ ಜೀರ್ಣಕ್ರಿಯೆ ಶಕ್ತಿ ಹೆಚ್ಚಿಸಿ, ಹಸಿವು ನಾರ್ಮಲ್ ಆಗಿರುವಂತೆ ಮಾಡಲು ಏನು ಮಾಡಬೇಕು ನೋಡೋಣ.

credit: social media

ಕಲ್ಲಂಗಡಿ ಹಣ್ಣು, ಸೌತೆಕಾಯಿಯಂತಹ ನೀರಿನಂಶವಿರುವ ಹಣ್ಣು, ತರಕಾರಿಗಳನ್ನು ಸೇವಿಸಿ

ದೇಹಕ್ಕೆ ನೀರಿನಂಶ ಕಡಿಮೆಯಾಗದಂತೆ ನೀರು, ಪಾನೀಯಗಳನ್ನು ಸೇವಿಸುತ್ತಿರಿ

ಕಾಫಿಯಂತಹ ಉಷ್ಣ ಮತ್ತು ಕೆಫೈನ್ ಅಂಶವಿರುವ ಪಾನೀಯಗಳನ್ನು ಅವಾಯ್ಡ್ ಮಾಡಿ

ಒಟ್ಟಿಗೇ ಆಹಾರ ಸೇವನೆ ಕಷ್ಟವಾದರೆ ನಿಯಮಿತ ಅವಧಿಗೊಮ್ಮೆ ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳಿ

ಹೆಚ್ಚು ಮಸಾಲೆ, ಖಾರ ಮತ್ತು ಜಿಡ್ಡು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ

ಬೇಸಿಗೆಯ ಬಿಸಿಲು ಎಂದು ಕೂತಲ್ಲೇ ಕೂರದೇ ದೇಹಕ್ಕೆ ಚಟವಟಿಕೆ ನೀಡುತ್ತಿರಿ.

ಯಾವುದೇ ಸಲಹೆ ಪಾಲಿಸುವ ಮೊದಲು ತಜ್ಞರ ವೈದ್ಯರ ಸಲಹೆ ಪಡೆದುಕೊಳ್ಳಿ.