ಅಕ್ಕಿ ಹಾಳಾಗದಂತೆ ಸಂರಕ್ಷಿಸಿಡುವ ಕ್ರಮ

ಅಕ್ಕಿ ತಂದರೆ ಕೆಲವು ಸಮಯದ ಬಳಿಕ ಅದು ಹುಳ ಬರುವುದು ಅಥವಾ ಹಾಳಾಗುವ ಅಪಾಯವಿದೆ. ಹೀಗಾಗಿ ಅಕ್ಕಿಯನ್ನು ಹಾಳಾಗದಂತೆ ದಾಸ್ತಾನು ಮಾಡಲು ಏನು ಮಾಡಬೇಕು? ಇಲ್ಲಿದೆ ಟಿಪ್ಸ್.

Photo Credit: Facebook, WD

ವಿಶೇಷವಾಗಿ ಮಳೆಗಾಲದಲ್ಲಿ ಶೈತ್ಯ ಮತ್ತು ತೇವಾಂಶದಿಂದ ಅಕ್ಕಿ ಬೇಗನೇ ಹಾಳಾಗಬಹುದು

ಹೀಗಾಗಿ ತುಂಬಾ ಪ್ರಮಾಣದಲ್ಲಿ ಅಕ್ಕಿ ತಂದರೆ ಒಂದು ಬಾರಿ ಬಿಸಿಲಿಗೆ ಹಾಕಿ ಬೆಚ್ಚಗೆ ಮಾಡಿ

ಬಳಿಕ ಗಾಳಿಯಾಡದ ಸಂಪೂರ್ಣವಾಗಿ ತೇವಾಂಶರಹಿತವಾದ ಪಾತ್ರೆಯಲ್ಲಿ ಮುಚ್ಚಳ ಮುಚ್ಚಿಡಿ

ಕಡು ವಾಸನೆಯಿರುವ ಪಾತ್ರೆಗಳಲ್ಲಿ ಅಕ್ಕಿಯನ್ನು ತುಂಬಾ ಸಮಯದವರೆಗೆ ಇಟ್ಟರೆ ಹಾಳಾಗಬಹುದು

ಅಡುಗೆ ಮನೆಯಲ್ಲಿ ಸಿಂಕ್ ಬಳಿ ಅಥವಾ ತೇವಾಂಶವಿರುವ ಜಾಗದಲ್ಲಿ ಅಕ್ಕಿಯ ಪಾತ್ರೆ ಇಡಬೇಡಿ

ಅಕ್ಕಿಯ ಪಾತ್ರೆಗೆ ಸ್ವಲ್ಪ ಬೇವಿನ ಒಣಗಿದ ಸೊಪ್ಪು ಹಾಕಿಟ್ಟರೆ ಬೇಗನೇ ಹಾಳಾಗದು

ಒದ್ದೆ ಕೈಯಲ್ಲಿ ಅಕ್ಕಿಯ ಪಾತ್ರೆಗೆ ಕೈ ಹಾಕಿ ತೇವಾಂಶವಾಗುವಂತೆ ಮಾಡಬೇಡಿ