ಕಣ್ಣಿನ ದೃಷ್ಟಿ ಚುರುಕಾಗಿರಲು ಹೀಗೆ ಮಾಡಿ

ಇತ್ತೀಚೆಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಸಮಸ್ಯೆಗಳು ಸಾಮಾನ್ಯವಾಗುತ್ತಿದೆ. ದೃಷ್ಟಿ ದೋಷ ಸರಿಪಡಿಸಿ ಕಣ್ಣಿನ ಆರೋಗ್ಯ ಸಂರಕ್ಷಣೆ ಮಾಡಲು ಏನು ಉಪಾಯಗಳಿವೆ ನೋಡೋಣ.

credit: social media

ಆಹಾರದಲ್ಲಿ ವಿಟಮಿನ್ ಎ, ಸಿ ಮತ್ತು ಇ ಅಂಶವಿರಲಿ.

ಧೂಮಪಾನಕ್ಕೆ ಗುಡ್ ಬೈ ಹೇಳಿದರೆ ಹಲವು ರೋಗಗಳು ದೂರವಾದೀತು.

ಮೊಬೈಲ್ ಅಥವಾ ಲ್ಯಾಪ್ ಟಾಪ್ ಸ್ಕ್ರೀನ್ ಸುದೀರ್ಘ ಕಾಲ ಕಣ್ಣು ಮಿಟುಕಿಸದೇ ನೋಡಬೇಡಿ

ಅನುವಂಶಿಕವಾಗಿ ಕಣ್ಣಿನ ಸಮಸ್ಯೆಯಿದೆಯೇ ಎಂದು ಪರಿಶೀಲಿಸಿ. ಇದ್ದರೆ ಅದಕ್ಕೆ ತಜ್ಞ ವೈದ್ಯರ ಸಲಹೆ ಪಡೆಯಿರಿ.

ನೀರು ಸಾಕಷ್ಟು ಕುಡಿಯುವುದರಿಂದ ಕಣ್ಣಿನ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ.

ಕಣ್ಣಿನ ನೈರ್ಮಲ್ಯ ಕಾಪಾಡಿಕೊಳ್ಳುವುದರತ್ತ ಗಮನಹರಿಸಿ.

ಸಾಕಷ್ಟು ನಿದ್ರೆ ಮಾಡುವುದರಿಂದ ಕಣ್ಣಿಗೂ ವಿಶ್ರಾಂತಿ ಸಿಗುತ್ತದೆ