ನೆಲ್ಲಿಕಾಯಿ ಸಿಹಿ ಕ್ಯಾಂಡಿ ಮಾಡುವ ವಿಧಾನ

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಆರೋಗ್ಯಕರ ಸಿಹಿ ಕ್ಯಾಂಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ನೆಲ್ಲಿಕಾಯಿಯನ್ನು ತೊಳೆದು ನೀರಿನಂಶ ತೆಗೆದಿಡಿ

ಇದನ್ನು ಒಂದು ಹಬೆ ಪಾತ್ರೆಗೆ ಹಾಕಿ ಬೇಯಿಸಿ

ಈಗ ಇದರ ಬೀಜಗಳನ್ನು ಪ್ರತ್ಯೇಕ ಮಾಡಿ ಹೋಳು ಮಾಡಿ

ಒಂದು ಪಾತ್ರೆಗೆ ಬೆಲ್ಲದ ಪುಡಿ ಮಾಡಿ ನೆಲ್ಲಿಕಾಯಿ ಹೋಳು ಸೇರಿಸಿ

ಇದನ್ನು ಮೂರು ದಿನಗಳ ಕಾಲ ಹೀಗೇ ಇಟ್ಟರೆ ನೀರು ಬಿಟ್ಟುಕೊಳ್ಳುತ್ತದೆ

ಬಳಿಕ ಬಿಸಿಲಿಗೆ ಒಣಗಿಸಿ ಸ್ವಲ್ಪ ಉಪ್ಪು ಸೇರಿಸಿ ತೆಗೆದಿಟ್ಟುಕೊಳ್ಳಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.