ಆಂಧ್ರ ಸ್ಟೈಲ್ ಪಪ್ಪು ಅಥವಾ ದಾಲ್ ಮಾಡುವ ವಿಧಾನ

ಆಂಧ್ರ ಸ್ಟೈಲ್ ಅಡುಗೆಯ ರುಚಿಯೇ ಬೇರೆ. ಸಾಮಾನ್ಯವಾಗಿ ನಾವು ಮಾಡುವ ದಾಲ್ ಗಿಂತ ಕೊಂಚ ಭಿನ್ನವಾಗಿ ಆಂಧ್ರ ಶೈಲಿಯಲ್ಲಿ ಸೊಪ್ಪಿನ ದಾಲ್ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲಿಗೆ ಬಾಣಲೆಗೆ ಒಂದು ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ

ಇದಕ್ಕೆ ಸಾಸಿವೆ, ಜೀರಿಗೆ, ಕಡಲೆಬೇಳೆ, ಒಣಮೆಣಸು ಹಾಕಿ ಹುರಿಯಿರಿ

ಈಗ ಇದಕ್ಕೆ ಸ್ವಲ್ಪ ಬೆಳ್ಳುಳ್ಳಿ, ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ

ಇದು ಹುರಿದ ಬಳಿಕ ಸ್ವಲ್ಪ ಕರಿಬೇವು, ಹೆಚ್ಚಿಟ್ಟ ಪಾಲಕ್ ಸೊಪ್ಪು ಹಾಕಿ

ಇದು ಚೆನ್ನಾಗಿ ಬೆಂದ ಬಳಿಕ ಬೇಯಿಸಿಟ್ಟ ತೊಗರಿ ಬೇಳೆ ಸೇರಿಸಿ

ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಬೇಕಾಗುವಷ್ಟು ನೀರು ಹಾಕಿ

ಇದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ಆಂಧ್ರ ಪಪ್ಪು ರೆಡಿ