ಮಲ್ನಾಡು ಸ್ಟೈಲ್ ಹುಳಿ ಹುಳಿ ಅಪ್ಪೆ ಸಾರು ರೆಸಿಪಿ

ಈಗ ಮಾವಿನ ಕಾಯಿ ಸೀಸನ್. ಅದರಲ್ಲೂ ಮಲೆನಾಡು ಕಡೆ ಅಪ್ಪೆ ಮಿಡಿ ಸಾರು ಫೇಮಸ್. ಇದನ್ನು ಮಾಮೂಲು ಮಾವಿನಕಾಯಿ ಬಳಸಿಕೊಂಡೂ ಮಾಡುವುದು ಹೇಗೆ ನೋಡಿ.

Photo Credit: Instagram

ಅಪ್ಪೆ ಮಿಡಿ ಅಥವಾ ಮಾಮೂಲು ಮಾವಿನ ಕಾಯಿಯನ್ನು ಬೇಯಿಸಿ

ಈಗ ಸಿಪ್ಪೆ ತೆಗೆದು ರಸ ಹಿಂಡಿಕೊಳ್ಳಿ

ಬಳಿಕ ಮಿಕ್ಸಿಗೆ ಹಾಕಿ ಸ್ವಲ್ಪ ನೀರು, ಉಪ್ಪು ಸೇರಿಸಿಕೊಂಡು ರುಬ್ಬಿ

ಈಗ ಇದನ್ನು ಪಾತ್ರೆಗೆ ಹಾಕಿ ಕುದಿಯಲು ಇಡಿ

ಎಷ್ಟು ನೀರು ಬೇಕೋ ಅಷ್ಟು ನೀರು ಸೇರಿಸಿಕೊಂಡು ಹಸಿಮೆಣಸು ಹಾಕಿ

ಇದು ಚೆನ್ನಾಗಿ ಕುದಿಯುವಾಗ ರುಚಿ ನೋಡಿಕೊಂಡು ಉಪ್ಪು ಸೇರಿಸಿ

ಬಳಿಕ ಜೀರಿಗೆ, ಇಂಗು, ಕರಿಬೇವು ಹಾಕಿದ ಒಗ್ಗರಣೆ ಕೊಟ್ಟರೆ ಹುಳಿ ರೆಡಿ