ಬಜ್ಜಿ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕ್ರಿಸ್ಪಿಯಾಗುತ್ತದೆ

ಚಳಿಗಾಲದ ಹವಾಗುಣಕ್ಕೆ ಬೆಚ್ಚಗೆ ಬಜ್ಜಿ ಜೊತೆ ಟೀ ಸೇವನೆ ಮಾಡುವುದು ಬಹುತೇಕರಿಗೆ ಇಷ್ಟವಾಗುತ್ತದೆ. ಬಜ್ಜಿ ಮಾಡುವಾಗ ಕೆಲವವೊಂದು ಟಿಪ್ಸ್ ಪಾಲಿಸಿದರೆ ಬಜ್ಜಿ ಕ್ರಿಸ್ಪಿಯಾಗುತ್ತದೆ.

Photo Credit: Instagram

ಮೆಣಸು ಅಥವಾ ಯಾವುದೇ ಬಜ್ಜಿ ಮಾಡುವಾಗ ಹಿಟ್ಟು ಹದವಾಗಿ ಬಂದರೆ ಮಾತ್ರ ಕ್ರಿಸ್ಪಿಯಾಗುತ್ತದೆ

ಹಿಟ್ಟು ತಯಾರಿಸುವಾಗ ಕಡಲೆ ಹಿಟ್ಟಿನ ಜೊತೆ ಸ್ವಲ್ಪ ಅಕ್ಕಿ ಹುಡಿ ಸೇರಿಸಬೇಕು

ಅಕ್ಕಿ ಹುಡಿ ಇಲ್ಲದೇ ಹೋದರೆ ಕಾರ್ನ್ ಫ್ಲಾರ್ ಕೂಡಾ ಸೇರಿಸಿ ಕಲಸಬಹುದು

ನೆನಪಿರಲಿ, ಅಕ್ಕಿ ಅಥವಾ ಕಾರ್ನ್ ಫ್ಲೋರ್ ಮೂರು ಸ್ಪೂನ್ ಗಿಂತ ಹೆಚ್ಚು ಸೇರಿಸಿದರೆ ಗಟ್ಟಿಯಾಗಬಹುದು

ಹಿಟ್ಟು ರೆಡಿ ಮಾಡಿದ ತಕ್ಷಣ ಬಜ್ಜಿ ಮಾಡಿದರೆ ಅದು ಕ್ರಿಸ್ಪಿನೆಸ್ ಕೊಡುವುದಿಲ್ಲ

ಹಿಟ್ಟು ಕಲಸಿ ಕನಿಷ್ಠ ಅರ್ಧಗಂಟೆ ಬಿಟ್ಟು ತರಕಾರಿ ಮುಳುಗಿಸಿ ಬಜ್ಜಿ ಬಿಟ್ಟುಕೊಳ್ಳಿ

ಬಜ್ಜಿ ಮಾಡುವಾಗ ಎಣ್ಣೆ ಚೆನ್ನಾಗಿ ಕಾದ ಬಳಿಕ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಬೇಕು