ಮೂರೇ ವಸ್ತುವಿನಿಂದ ಬಾಳೆಹಣ್ಣಿನ ಐಸ್ ಕ್ರೀಂ

ಬೇಸಿಗೆಕಾಲದಲ್ಲಿ ತಂಪಾದ ಐಸ್ ಕ್ರೀಂ ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಎರಡು-ಮೂರು ಬಾಳೆ ಹಣ್ಣಿದ್ದರೆ ಮನೆಯಲ್ಲೇ ಐಸ್ ಕ್ರೀಂ ಮಾಡಬಹುದು.

Photo Credit: Instagram

ಮೊದಲಿಗೆ ಮೂರು ಪಚ್ಚೆ ಬಾಳೆಹಣ್ಣು ತೆಗೆದುಕೊಂಡು ಕಟ್ ಮಾಡಿ

ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ಎರಡು ಗಂಟೆ ಕಾಲ ಫ್ರೀಝರ್ ನಲ್ಲಿಡಿ

ಈಗ ಇದಕ್ಕೆ ಸ್ವಲ್ಪ ಸಕ್ಕರೆ, ಕಾಲು ಕಪ್ ಹಾಲು ಹಾಕಿ

ಟೇಸ್ಟ್ ಕೊಡಲು ಚಾಕಲೇಟ್ ಎಸೆನ್ಸ್ ಅಥವಾ ವೆನಿಲಾ ಎಸೆನ್ಸ್ ಸೇರಿಸಿ

ಇವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ

ಬಳಿಕ ಈ ಮಿಶ್ರಣವನ್ನು ಒಂದು ಗಂಟೆ ಫ್ರೀಝರ್ ನಲ್ಲಿಡಿ

ಈಗ ಹೊರಗೆ ತೆಗೆದು ಒಂದು ಬೌಲ್ ಗೆ ಹಾಕಿ ಐಸ್ ಕ್ರೀಂ ಸವಿಯಿರಿ