ಬಾರ್ಲಿ ಬಳಸಿ ಮೊಸರನ್ನ ಮಾಡುವ ವಿಧಾನ ಇಲ್ಲಿದೆ

ಬಾರ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿದ್ದು ದೇಹ ತಂಪಾಗಿರುವಂತೆ ನೋಡಿಕೊಳ್ಳುತ್ತದೆ. ಬಾರ್ಲಿ ಕಿಡ್ನಿ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿದ್ದರೆ ಸೇವಿಸಲೇಬಕು. ಬಾರ್ಲಿ ಬಳಸಿ ಆರೋಗ್ಯಕರವಾದ ಮೊಸರನ್ನ ತಯಾರಿಸುವುದು ಹೇಗೆ ಎಂದು ಇಲ್ಲಿದೆ ವಿಧಾನ.

Photo Credit: Instagram, AI image

ಮೊದಲಿಗೆ ಒಂದು ಕಪ್ ಬಾರ್ಲಿಯನ್ನು ತೊಳೆದುಕೊಂಡು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ

ಈಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಒಗ್ಗರಣೆ ಕೊಡಿ

ಇದಕ್ಕೆ ಹಸಿಮೆಣಸು, ಶುಂಠಿ ಮತ್ತು ಕರಿಬೇವಿನ ಎಲೆ ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿಕೊಳ್ಳಿ

ಇದು ಫ್ರೈ ಆದ ಬಳಿಕ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ

ಈಗ ಇದಕ್ಕೆ ಬೇಯಿಸಿಟ್ಟುಕೊಂಡ ಬಾರ್ಲಿಯನ್ನು ಗಂಜಿ ಸಮೇತ ಹಾಕಿ ತಿರುವಿಕೊಳ್ಳಿ

ಬಳಿಕ ದಪ್ಪ ಮೊಸರನ್ನೂ ಸೇರಿಸಿಕೊಂಡು ರುಚಿಗೆ ತಕ್ಕ ಉಪ್ಪು ಹಾಕಿ ತಿರುವಿ

ಕೊನೆಯಲ್ಲಿ ಸ್ವಲ್ಪ ಇಂಗು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿದರೆ ಬಾರ್ಲಿ ಮೊಸರನ್ನ ಸವಿಯಲು ರೆಡಿ