ಬೀಟ್ ರೂಟ್ ಬಳಸಿ ನ್ಯಾಚುರಲ್ ಲಿಪ್ ಸ್ಟಿಕ್ ತಯಾರಿಸಿ

ಕೆಲವರಿಗೆ ಕೆಮಿಕಲ್ ಯುಕ್ತ ಲಿಪ್ ಸ್ಟಿಕ್ ಬಳಸಿದರೆ ಅಲರ್ಜಿಯಾಗುತ್ತದೆ. ಅದಕ್ಕಾಗಿ ಬೀಟ್ ರೂಟ್ ಬಳಸಿ ನ್ಯಾಚುರಲ್ ಆಗಿರುವ ಲಿಪ್ ಸ್ಟಿಕ್ ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಮೊದಲು ಬೀಟ್ ರೂಟ್ ಸಿಪ್ಪೆ ತೆಗೆದು ತೊಳೆದುಕೊಳ್ಳಿ

ಇದನ್ನು ಒಂದು ಬಟ್ಟಲಿನಷ್ಟು ತುರಿದುಕೊಳ್ಳಿ

ಈಗ ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ರಸ ಹಿಂಡಿಕೊಳ್ಳಿ

ಒಂದು ಬಾಣಲೆಗೆ ಈ ರಸವನ್ನು ಹಾಕಿ ಚೆನ್ನಾಗಿ ಕುದಿಸಿ

ಇದು ದಪ್ಪ ಆಗುವಷ್ಟು ಕುದಿಯುವಾಗ ಸ್ವಲ್ಪ ತುಪ್ಪ ಸೇರಿಸಿ

ಈಗ ಇದನ್ನು ತಣಿಯಲು ಬಿಟ್ಟು ಒಂದು ಪಾತ್ರೆಗೆ ಹಾಕಿಕೊಳ್ಳಿ

ಇದನ್ನು ಫ್ರಿಡ್ಜ್ ನಲ್ಲಿಟ್ಟುಕೊಂಡು ಬೇಕೆಂದಾಗ ತುಟಿಗೆ ಹಚ್ಚಿಕೊಳ್ಳಬಹುದು