ಬೀಟ್ ರೂಟ್ ನಿಂದ ಈ ರೀತಿ ಡಿಫರೆಂಟ್ ಪಲ್ಯ ಮಾಡಿ

ಬೀಟ್ ರೂಟ್ ನ್ನು ಚಿಕ್ಕದಾಗಿ ಕತ್ತರಿಸಿ ಪಲ್ಯ ಮಾಡಿ ಬೇಸತ್ತಿದ್ದರೆ ಇನ್ನೊಂದು ರೀತಿಯಲ್ಲಿ ಪಲ್ಯ ಮಾಡಬಹುದು. ಬೀಟ್ ರೂಟನ್ನು ತುರಿದು ಈರುಳ್ಳಿ ಸೇರಿಸಿ ಇನ್ನಷ್ಟು ರುಚಿಕರವಾಗಿ ಪಲ್ಯ ಮಾಡಬಹದು. ಇದನ್ನು ಚಪಾತಿ ಜೊತೆಗೂ ಸೇರಿಸಿ ತಿನ್ನಬಹುದು.

Photo Credit: Instagram, AI image

ಮೊದಲಿಗೆ ಎರಡು ಬೌಲ್ ನಷ್ಟು ಬೀಟ್ ರೂಟ್ ತುರಿದಿಟ್ಟುಕೊಳ್ಳಿ

ಇದಕ್ಕೆ ಸೇರಿಸಲು ಚಿಕ್ಕದಾಗಿ ಹಚ್ಚಿದ ಈರುಳ್ಳಿ, ಕರಿಬೇವು ಕೂಡಾ ರೆಡಿ ಮಾಡಿಟ್ಟುಕೊಳ್ಳಿ

ಈಗ ಬಾಣಲೆಗೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ

ಇದಕ್ಕೆ ಮೊದಲಿಗೆ ಚಿಕ್ಕದಾಗಿ ಹಚ್ಚಿದ ಈರುಳ್ಳಿ, ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದಕ್ಕೆ ತುರಿದಿಟ್ಟುಕೊಂಡಿರುವ ಬೀಟ್ ರೂಟ್ ನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ಉಪ್ಪು, ಸ್ವಲ್ಪ ಬೆಲ್ಲ, ಖಾರದ ಪುಡಿ ಹಾಕಿ ತಿರುವಿ ಮುಚ್ಚಿ ಬೇಯಲು ಬಿಡಿ

ಬೆಂದ ಬಳಿಕ ಇದನ್ನು ಚೆನ್ನಾಗಿ ತಿರುವಿಕೊಂಡು ಸ್ವಲ್ಪ ಕಾಯಿ ತುರಿ ಹಾಕಿ ತಿರುವಿದರೆ ಪಲ್ಯ ರೆಡಿ