ಹಸಿವಾಸನೆ ಬಾರದಂತೆ ಬೀಟ್ ರೂಟ್ ರಾಯತ ಮಾಡಿ

ಬೀಟ್ ರೂಟ್ ಕೆಲವರಿಗೆ ಹಸಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಸೇವಿಸಲು ಇಷ್ಟವಾಗುವುದಿಲ್ಲ. ಹಸಿವಾಸನೆ ಬಾರದಂತೆ ಬೀಟ್ ರೂಟ್ ಮೊಸರು ರಾಯತ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲಿಗೆ ಬೀಟ್ ರೂಟ್ ನ್ನು ನೀರಿಗೆ ಹಾಕಿ ಒಂದು ಕುದಿ ಬರಿಸಿ

ಇದರಿಂದ ಬೀಟ್ ರೂಟ್ ಹಸಿವಾಸನೆ ಹೋಗುತ್ತದೆ

ಈಗ ಸಿಪ್ಪೆ ತೆಗೆದು ಚಿಕ್ಕದಾಗಿ ತುರಿದು ಬೌಲ್ ಗೆ ಹಾಕಿ

ಇದಕ್ಕೆ ಒಂದು ಕಪ್ ಮೊಸರು, ಚ್ಯಾಟ್ ಮಸಾಲ ಹಾಕಿ

ಇದನ್ನು ಚೆನ್ನಾಗಿ ಕಲಸಿಕೊಂಡು ರುಚಿಗೆ ತಕ್ಕ ಉಪ್ಪು ಸೇರಿಸಿ

ಈಗ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ತುಪ್ಪದಲ್ಲಿ ಒಗ್ಗರಣೆ ಕೊಡಿ

ಈ ರಾಯತವನ್ನು ಹಾಗೆಯೇ ಅಥವಾ ಅನ್ನಕ್ಕೆ ಸೇರಿಸಿ ಸೇವನೆ ಮಾಡಬಹುದು