ಬೇಕರಿಗಳಲ್ಲಿ ಸಿಗುವ ಬ್ರೆಡ್ ಟೋಸ್ಟ್ ರುಚಿ ನಮ್ಮ ಮನೆಯಲ್ಲಿ ಮಾಡಿದರೆ ಸಿಗಲ್ಲ ಎಂಬ ಬೇಸರವೇ? ಚಿಂತೆ ಬೇಡ, ಮನೆಯಲ್ಲಿಯೂ ಬೇಕರಿ ಶೈಲಿಯಲ್ಲಿ ರುಚಿಕರವಾಗಿ ಬ್ರೆಡ್ ಟೋಸ್ಟ್ ಮಾಡಬಹುದು. ಹೇಗೆ ಇಲ್ಲಿ ನೋಡಿ.
Photo Credit: Instagram, AI image
ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಸಾಸಿವೆ ಹಾಕಿ ಒಗ್ಗರಣೆ ಕೊಡಿ
ಇದು ಸಿಡಿದ ಬಳಿಕ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ
ಇದು ಫ್ರೈ ಆದ ಬಳಿಕ ಚಿಕ್ಕದಾಗಿ ಕತ್ತರಿಸಿ ಕ್ಯಾಪ್ಸಿಕಂ ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ
ಇದು ಫ್ರೈ ಆದ ಬಳಿಕ ಇದಕ್ಕೆ ಸ್ವಲ್ಪ ತುರಿದ ಕ್ಯಾರೆಟ್, ಕ್ಯಾಬೇಜ್ ಹಾಕಿ ಚೆನ್ನಾಗಿ ಫ್ರೈ ಮಾಡಿ
ಬಳಿಕ ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ನಿಂಬೆ ಹಣ್ಣಿನ ರಸ ಸೇರಿಸಿ
ಈಗ ಒಂದು ಪ್ಯಾನ್ ನಲ್ಲಿ ಬೆಣ್ಣೆ ಹಾಕಿ ಎರಡು ಬ್ರೆಡ್ ನ್ನು ಚೆನ್ನಾಗಿ ರೋಸ್ಟ್ ಮಾಡಿ
ಈಗಾಗಲೇ ರೆಡಿ ಮಾಡಿರುವ ಮಸಾಲೆಯನ್ನು ಬ್ರೆಡ್ ನಡುವೆ ಹಾಕಿ ಕತ್ತರಿಸಿದರೆ ಬ್ರೆಡ್ ಟೋಸ್ಟ್ ರೆಡಿ