ಕ್ಯಾಪ್ಸಿಕಂ ಸ್ಟಫ್ ಈ ರೀತಿ ಮಾಡಿದ್ರೆ ಸಖತ್ ಟೇಸ್ಟಿ

ಅನ್ನ, ಚಪಾತಿ ಜೊತೆಗೆ ಕಲಸಿ ತಿನ್ನಲು ಕ್ಯಾಪ್ಸಿಕಂ ಸ್ಟಫ್ ಫ್ರೈ ಈ ರೀತಿ ಮಾಡಿ ಸೇವನೆ ಮಾಡಿದ್ರೆ ಒಂದು ತುತ್ತು ಜಾಸ್ತಿಯೇ ಊಟ ಮಾಡ್ತೀರಿ.

Photo Credit: Instagram

ಕ್ಯಾಪ್ಸಿಕಂ ತಿರುಳು ತೆಗೆದು ಕಪ್ ರೀತಿ ಮಾಡಿಕೊಳ್ಳಿ

ಶುಂಠಿ, ಬೆಳ್ಳುಳ್ಳಿ, ಜೀರಿಗೆ, ನೆಲಗಡಲೆ ಜಜ್ಜಿಕೊಳ್ಳಿ

ಇದಕ್ಕೆ ಸ್ವಲ್ಪ ಎಳ್ಳು, ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ

ಇದಕ್ಕೆ ಕಾಲು ಕಪ್ ಕಡ್ಲೆ ಹಿಟ್ಟು, ಗರಂ ಮಸಾಲೆ ಸೇರಿಸಿ

ಬಳಿಕ ಖಾರದಪುಡಿ, ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಮಸಾಲೆ ಸ್ಟಫ್ ಮಾಡಿ

ಈಗ ಬಾಣಲೆಗೆ ಒಗ್ಗರಣೆ ಹಾಕಿ ಕ್ಯಾಪ್ಸಿಕಂನ್ನು ಅದಕ್ಕೆ ಸೇರಿಸಿ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.