ತೆಂಗಿನಕಾಯಿ ಬಳಸದೇ ಮಾಡುವ ಚಟ್ನಿ ರೆಸಿಪಿ

ಇಡ್ಲಿಗೆ ಬೆಸ್ಟ್ ಕಾಂಬಿನೇಷನ್ ಆಗಬಲ್ಲ ತೆಂಗಿನ ಕಾಯಿ ಬಳಸದೇ ಮಾಡುವ ಚಟ್ನಿ ಮಾಡುವುದು ಹೇಗೆ ಎಂದು ಇಂದು ನಾವು ನೋಡೋಣ.

Photo Credit: Instagram

ಮೊದಲು ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ ಹಾಕಿ

ಇದನ್ನು ಬಾಡಿದ ಮೇಲೆ ಸ್ವಲ್ಪ ಕರಿಬೇವು ಸೇರಿಸಿ ಫ್ರೈ ಮಾಡಿ

ಈಗ ಸ್ವಲ್ಪ ಸಿಪ್ಪೆ ಸುಲಿದ ನೆಲಗಡಲೆ, ಹಸಿಮೆಣಸು ಸೇರಿಸಿ

ಇದು ಚೆನ್ನಾಗಿ ಫ್ರೈ ಆದ ಬಳಿಕ ಒಂದು ಮಿಕ್ಸಿ ಜಾರ್ ಗೆ ವರ್ಗಾಯಿಸಿ

ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ

ಈಗ ಬಾಣಲೆಗೆ ಸಾಸಿವೆ, ಉದ್ದಿನಬೇಳೆ, ಮೆಣಸು, ಕರಿಬೇವಿನ ಒಗ್ಗರಣೆ ಕೊಡಿ

ಈ ಚಟ್ನಿಯನ್ನು ಇಡ್ಲಿ ಜೊತೆಗೆ ಸೇವಿಸಲು ಸೂಪರ್ ಆಗಿರುತ್ತದೆ