ಚೌಳಿಕಾಯಿ ಪಲ್ಯ ತವಾ ಫ್ರೈ ರೀತಿ ಮಾಡಿ

ಚೌಳಿಕಾಯಿ ಪಲ್ಯ ತಿಂದಿರುತ್ತೀರಿ. ಆದರೆ ಇದನ್ನು ತವಾ ಫ್ರೈ ರೀತಿ ಮಾಡಿದರೆ ರುಚಿ ಹೆಚ್ಚು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ತವಾಗೆ ಎಣ್ಣೆ, ಜೀರಿಗೆ, ಕತ್ತರಿಸಿದ ಚೌಳಿಕಾಯಿ ಹಾಕಿ

ಇದನ್ನು ಫ್ರೈ ಮಾಡುವಾಗ ಸ್ವಲ್ಪ ಉಪ್ಪು, ಮೆಣಸು ಹಾಕಿ

ಈಗ ಧನಿಯಾ ಪೌಡರ್ ಕೂಡಾ ಸೇರಿಸಿ ಫ್ರೈ ಮಾಡಿ

ಇದು ಫ್ರೈ ಆದ ಮೇಲೆ ನೆಲಗಡಲೆ, ಬೆಲ್ಲದ ಪುಡಿ ಮಾಡಿ ಸೇರಿಸಿ

ಮಸಾಲೆ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ಪಲ್ಯ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.