ತೆಂಗಿನ ಹಾಲಿನಿಂದ ಕುಲ್ಫೀ ಮನೆಯಲ್ಲೇ ಮಾಡಿ

ತೆಂಗಿನ ಹಾಲು ಬಳಸಿ ಬೇಸಿಗೆಯಲ್ಲಿ ಬಾಯಿ ಚಪ್ಪರಿಸಿಕೊಂಡು ಸವಿಯಬಹುದಾದ ಕುಲ್ಫೀ ಮನೆಯಲ್ಲಿಯೇ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ವಿಧಾನ.

Photo Credit: Instagram

ಮೊದಲು ತೆಂಗಿನ ಕಾಯಿ ಹೋಳು ಮಾಡಿ ಮಿಕ್ಸಿ ಜಾರ್ ಗೆ ಹಾಕಿ

ಇದಕ್ಕೆ ಎರಡು ಸ್ಪೂನ್ ಮಿಲ್ಕ್ ಪೌಡರ್, ಏಲಕ್ಕಿ, ಸಕ್ಕರೆ, ಹಾಲು ಸೇರಿಸಿ ರುಬ್ಬಿ

ಈಗ ಇದನ್ನು ಒಂದು ಬಾಣಲೆಗೆ ಹಾಕಿ ಚೆನ್ನಾಗಿ ಕುದಿಸಿ

ಕುದಿಯುವಾಗ ಬೇಕಿದ್ದರೆ ಸ್ವಲ್ಪ ಕೇಸರಿ ಸೇರಿಸಬಹುದು

ಈಗ ಇದು ಸ್ವಲ್ಪ ಮಂದವಾದಾಗ ಬೆಂಕಿ ಆರಿಸಿ ತಣಿಯಲು ಬಿಡಿ

ಈಗ ಇದನ್ನು ಕ್ಯಾಂಡಿ ಸ್ಟ್ಯಾಂಡ್ ಗೆ ಹಾಕಿಕೊಂಡು ಫ್ರೀಝರ್ ನಲ್ಲಿಡಿ

ಈಗ 12 ಗಂಟೆ ಕಾಲ ಫ್ರೀಝರ್ ನಲ್ಲಿಟ್ಟರೆ ಕುಲ್ಫಿ ರೆಡಿಯಾಗಿರುತ್ತದೆ