ದಿಡೀರ್ ಆಗಿ ಮಾಡಬಹುದಾದ ತೆಂಗಿನಕಾಯಿ ಲಡ್ಡು

ದಿಡೀರ್ ಆಗಿ ಸ್ವೀಟ್ ತಿನ್ನಬೇಕು ಎನಿಸಿದರೆ ಹತ್ತೇ ನಿಮಿಷದಲ್ಲಿ ತೆಂಗಿನಕಾಯಿ ತುರಿ ರುಚಿ ರುಚಿಯಾಗಿ ಲಡ್ಡು ಮಾಡಬಹುದು. ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಒಂದು ಬಾಣಲೆಗೆ ತುಪ್ಪ ಹಾಕಿ ತೆಂಗಿನ ತುರಿ ಹಾಕಿ ಫ್ರೈ ಮಾಡಿ

ಇದು ಬಣ್ಣ ಮಾಸುವಾಗ ಸ್ವಲ್ಪ ಮಿಲ್ಕ್ ಪೌಡರ್, ಸಕ್ಕರೆ ಮಿಕ್ಸ್ ಮಾಡಿ

ಈಗ ಇದಕ್ಕೆ ಏಲಕ್ಕಿ ಪೌಡರ್ ಕೂಡಾ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ

ಇದು ಹದಕ್ಕೆ ಬರುವಾಗ ಸ್ವಲ್ಪ ಹಾಲು ಸೇರಿಸಿಕೊಂಡು ದಪ್ಪ ಆಗುವವರೆಗೆ ಕಲಸಿ

ಈಗ ಸ್ಟವ್ ಆಫ್ ಮಾಡಿ ಉಂಡೆ ಕಟ್ಟಿಕೊಳ್ಳಿ

ಬಳಿಕ ಸಕ್ಕರೆ ಪೌಡರ್ ನಲ್ಲಿ ಅದ್ದಿದರೆ ಲಡ್ಡು ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.