ಕುರುಂ ಕುರುಂ ಕಾರ್ನ್ ಮಿಕ್ಷ್ಚರ್ ಮಾಡಿ

ಕಾರ್ನ್ ಫ್ಲೇಕ್ಸ್ ಬಳಸಿ ಬೇಕರಿಯಲ್ಲಿ ಸಿಗುವಂತೆ ಮಿಕ್ಸ್ಚರ್ ಮನೆಯಲ್ಲೇ ಮಾಡಬಹುದು. ಇದು ಸಂಜೆ ಚಹಾ ಜೊತೆ ಸೇವನೆ ಮಾಡಲು ಹೇಳಿಮಾಡಿಸಿದ ಕುರುಕಲು.

Photo Credit: Instagram

ಮೊದಲಿಗೆ ಒಂದು ಬೌಲ್ ನಷ್ಟು ಕಾರ್ನ್ ಫ್ಲೇಕ್ಸ್ ತೆಗೆದುಕೊಳ್ಳಿ

ಈಗ ಎಣ್ಣೆಗೆ ಕಾರ್ನ್ ಫ್ಲೇಕ್ಸ್ ಹಾಕಿ ಹುರಿದುಕೊಳ್ಳಿ

ಇದನ್ನು ಹೆಚ್ಚು ಹೊತ್ತು ಎಣ್ಣೆಯಲ್ಲಿ ಬಿಟ್ಟರೆ ಕರಕಲಾಗಬಹುದು

ಬಳಿಕ ಸ್ವಲ್ಪ ನೆಲಗಡಲೆಯನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ

ಈಗ ಸ್ವಲ್ಪ ಕರಿಬೇವು ಮತ್ತು ಗೋಡಂಬಿಯನ್ನೂ ಹುರಿದಿಟ್ಟುಕೊಳ್ಳಿ

ಇವೆಲ್ಲವನ್ನೂ ಮಿಕ್ಸ್ ಮಾಡಿ ಉಪ್ಪು, ಖಾರ ಸೇರಿಸಿದರೆ ಕಾರ್ನ್ ಮಿಕ್ಸ್ಚರ್ ರೆಡಿ