ದೋಸೆ ಮಾಡುವಾಗ ಈ ಎರಡು ವಸ್ತು ಸೇರಿಸಿದ್ರೆ ಮೃದುವಾಗುತ್ತದೆ

ದೋಸೆ ಹಿಟ್ಟು ತಯಾರಿಸುವಾಗ ಈ ಎರಡು ವಸ್ತುಗಳನ್ನು ಸೇರಿಸುವುದರಿಂದ ನೀವು ಮಾಡುವ ದೋಸೆ ಮೃದು ಮತ್ತು ಕ್ರಿಸ್ಪಿಯಾಗಿ ಬರುತ್ತದೆ. ಹಾಗಿದ್ದರೆ ಮೃದು ಮತ್ತು ಕ್ರಿಸ್ಪಿಯಾಗಿ ದೋಸೆ ಮಾಡಲು ಯಾವ ವಸ್ತುವನ್ನು ಸೇರಿಸಬೇಕು ನೋಡೋಣ.

Photo Credit: Instagram, WD

ಮಸಾಲ ದೋಸೆ ಅಥವಾ ಸೆಟ್ ದೋಸೆ ಎಂದರೆ ಅದು ಮೃದು ಮತ್ತು ಕ್ರಿಸ್ಪಿಯಾಗಿದ್ದರೆ ರುಚಿ ಹೆಚ್ಚು

ದೋಸೆ ಮಾಡುವಾಗ ಅಕ್ಕಿ ಮತ್ತು ಉದ್ದಿನ ಪ್ರಮಾಣ ಹದವಾಗಿದ್ದರೆ ದೋಸೆ ಚೆನ್ನಾಗಿ ಬರುತ್ತದೆ

ದೋಸೆ ಮಾಡುವಾಗ ಅಕ್ಕಿ, ಉದ್ದಿನ ಬೇಳೆ ಜೊತೆಗೆ ಸ್ವಲ್ಪ ಸಬ್ಬಕ್ಕಿ ನೆನೆ ಹಾಕಿ ಸೇರಿಸಿ

ಸಬ್ಬಕ್ಕಿ ದೋಸೆಯನ್ನು ಹೆಚ್ಚು ಮೃದುವಾಗಿ ಮಾಡುವುದರಿಂದ ರುಚಿ ಹೆಚ್ಚುತ್ತದೆ

ಇದರ ಜೊತೆಗೆ ಸ್ವಲ್ಪ ಅವಲಕ್ಕಿಯನ್ನು ನೆನೆ ಹಾಕಿ ಸೇರಿಸಿದರೆ ದೋಸೆ ಕ್ರಿಸ್ಪಿಯಾಗುತ್ತದೆ

ಒಂದು ವೇಳೆ ಸಬ್ಬಕ್ಕಿ ಇಲ್ಲದೇ ಹೋದರೆ ಉಳಿದಿರುವ ಅನ್ನವನ್ನೂ ಸೇರಿಸಬಹುದು

ದೋಸೆ ಹಿಟ್ಟನ್ನು ಕನಿಷ್ಠ ಎಂಟು ಗಂಟೆಗಳ ಕಾಲ ಹುಳಿ ಬರಲು ಇಟ್ಟರೆ ಚೆನ್ನಾಗಿ ಬರುತ್ತದೆ