ಸಬ್ಬಕ್ಕಿ ತುಕ್ಕುಡಿ ಮಾಡುವುದು ಹೇಗೆ ನೋಡಿ

ಸಬ್ಬಕ್ಕಿ ಬಳಸಿ ರುಚಿಕರವಾಗಿ ಮಸಾಲ ತುಕ್ಕುಡಿ ಮಾಡಬಹುದು. ಇದು ಸಂಜೆ ಚಹಾಕ್ಕೆ ಬೆಸ್ಟ್ ಕಾಂಬಿನೇಷನ್.

Photo Credit: Instagram

ಮೊದಲು ಸಬ್ಬಕ್ಕಿಯನ್ನು ಬಿಸಿ ಮಾಡಿ ಮಿಕ್ಸಿಯಲ್ಲಿ ಪುಡಿ ಮಾಡಿ

ಬೌಲ್ ಗೆ ತುರಿದ ಆಲೂಗಡ್ಡೆ, ಉಪ್ಪು, ಹಸಿಮೆಣಸು ಪೇಸ್ಟ್, ಇಂಗು ಹಾಕಿ

ಇದಕ್ಕೆ ಪುಡಿ ಮಾಡಿದ ಸಬ್ಬಕ್ಕಿಯನ್ನೂ ಸೇರಿಸಿ ಗಟ್ಟಿ ಹಿಟ್ಟು ರೆಡಿ ಮಾಡಿ

ಒಂದು ಪ್ಲೇಟ್ ಗೆ ಎಣ್ಣೆ ಸವರಿ ಹಿಟ್ಟನ್ನು ದಪ್ಪಗೆ ತಟ್ಟಿಕೊಳ್ಳಿ

ನಂತರ ಇದನ್ನು ಚಾಕುವಿನಿಂದ ಕತ್ತರಿಸಿಕೊಳ್ಳಿ

ಇದನ್ನು ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.