ಬಲಿತ ಬೆಂಡೆಕಾಯಿಯನ್ನು ಬಿಸಾಕಬೇಡಿ, ಈ ರೆಸಿಪಿ ಮಾಡಿ ನೋಡಿ

ಬೆಂಡೆಕಾಯಿ ಮನೆಗೆ ತಂದು ಎರಡೇ ದಿನಕ್ಕೆ ಬಲಿತು ಹೋಯಿತು ಎಂದು ಅದನ್ನು ಕಸದ ಬುಟ್ಟಿಗೆ ಸೇರಿಸಬೇಡಿ. ಬಲಿತ ಬೆಂಡೆಕಾಯಿಯನ್ನು ಹಾಳಾಗದಂತೆ ಈ ರೀತಿ ಫ್ರೈ ಮಾಡಿ ಸೇವನೆ ಮಾಡಬಹುದು.

Photo Credit: Instagram, Facebook

ಬೆಂಡೆಕಾಯಿ ಬಲಿತಿದ್ದರೆ ಅದನ್ನು ನಾಲ್ಕು ತುಂಡುಗಳಾಗಿ ಸೀಳಿಕೊಳ್ಳಿ

ಒಂದು ಬೌಲ್ ನಲ್ಲಿ ಕಾರ್ನ್ ಫ್ಲೋರ್, ಖಾರದ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ನೀರು ಹಾಕದೆ ಮಿಕ್ಸ್ ಮಾಡಿ

ಈಗ ಸೀಳಿದ ಬೆಂಡೆಕಾಯಿ ಹೋಳುಗಳನ್ನು ಅದರಲ್ಲಿ ಮುಳುಗಿಸಿ ಮಿಕ್ಸ್ ಮಾಡಿ

ಈಗ ಒಂದು ತವಾಗೆ ಎಣ್ಣೆ ಹಾಕಿ ಬೆಂಡೆಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದು ಗರಿ ಗರಿಯಾಗುವಂತೆ ಫ್ರೈ ಮಾಡಿಕೊಂಡರೆ ಊಟದ ಜೊತೆಗೆ ಸೈಡ್ ಡಿಶ್ ಆಗಿ ಬಳಸಬಹುದು

ಬಲಿತ ಬೆಂಡೆಕಾಯಿಯನ್ನು ನೀರನಲ್ಲಿ ನೆನೆಸಿ ಅದರ ನೀರು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ

ಬಲಿತ ಬೆಂಡೆಕಾಯಿಯ ಲೋಳೆಯನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖ ಕಾಂತಿಯುತವಾಗುತ್ತದೆ