ಉಳಿದ ಅನ್ನದಿಂದ ದಿಡೀರ್ ದೋಸೆ ರೆಸಿಪಿ

ಅನ್ನ ಉಳಿದಿದ್ದರೆ ಅದನ್ನು ವೇಸ್ಟ್ ಮಾಡುವ ಬದಲು ದಿಡೀರ್ ಆಗಿ ದೋಸೆ ಮಾಡಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಒಂದು ಬೌಲ್ ಉಳಿದ ಅನ್ನ ತೆಗೆದುಕೊಳ್ಳಿ

ಇದಕ್ಕೆ ಅರ್ಧ ಕಪ್ ನಷ್ಟು ರವೆ ಸೇರಿಸಿಕೊಳ್ಳಿ

ಈಗ ಕಾಲು ಕಪ್ ನಷ್ಟು ಹುಳಿ ಮೊಸರು ಹಾಕಿ

ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಉಪ್ಪು ಸೇರಿಸಿ

ಈಗ ತವಾ ಒಲೆ ಮೇಲಿಟ್ಟು ಬಿಸಿಯಾದಾಗ ದೋಸೆ ಹುಯ್ದುಕೊಳ್ಳಿ

ಬಳಿಕ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ

ಈಗ ರೋಸ್ಟ್ ಆಗಿರುವ ದೋಸೆ ರೆಡಿಯಾಗುತ್ತದೆ.