ನುಗ್ಗೆಕಾಯಿ ಪಲ್ಯ ಮಾಡುವುದು ಹೇಗೆ

ನುಗ್ಗೆಕಾಯಿ ದೇಹಕ್ಕೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಕೊಡುತ್ತದೆ. ಇದು ಶಕ್ತಿವರ್ಧನ, ಕಬ್ಬಿಣದಂಶವಿರುವ ಆಹಾರ ವಸ್ತು, ಇದರ ಪಲ್ಯ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ

ಈಗ ಈರುಳ್ಳಿ, ಟೊಮೆಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದು ಫ್ರೈ ಆಗುತ್ತಿರುವಾಗ ಅರಿಶಿನ, ಧನಿಯಾ ಪೌಡರ್, ಇಂಗು ಹಾಕಿ

ಬಳಿಕ ಕತ್ತರಿಸಿದ ನುಗ್ಗೆಕಾಯಿಯನ್ನು ಸೇರಿಸಿ ಫ್ರೈ ಮಾಡಿ

ಸ್ವಲ್ಪ ಉಪ್ಪು, ಸ್ವಲ್ಪವೇ ನೀರು ಹಾಕಿ 10 ನಿಮಿಷ ಬೇಯಿಸಿ

ಈಗ ಇದಕ್ಕೆ ಕಾಯಿ ತುರಿ ಸೇರಿಸಿ ಚೆನ್ನಾಗಿ ಕಲಸಿದರೆ ಪಲ್ಯ ರೆಡಿ