ಐಸ್ ಕ್ರೀಂ ಹಾಕದೇ ಫ್ರೂಟ್ ಸಲಾಡ್ ಮಾಡುವ ವಿಧಾನ
ಫ್ರೂಟ್ ಸಲಾಡ್ ಜೊತೆ ಐಸ್ ಕ್ರೀಂ ಸೇವನೆ ಆಗಿಬರದೇ ಇದ್ದರೆ ಐಸ್ ಕ್ರೀಂ ಇಲ್ಲದೆಯೂ ಮಾಡಬಹುದು. ಹೇಗೆ ಇಲ್ಲಿದೆ ಟಿಪ್ಸ್.
Photo Credit: Instagram
ಮೊದಲು ಆಪಲ್, ದ್ರಾಕ್ಷಿ, ಬಾಳೆಹಣ್ಣು, ಪೈನಾಪಲ್ ಚಿಕ್ಕದಾಗಿ ಹೆಚ್ಚಿ
ಈಗ ಇದನ್ನು ಬೌಲ್ ಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
ಈಗ ಇದಕ್ಕೆ ಎರಡು ಸ್ಪೂನ್ ಜೇನು ತುಪ್ಪ ಹಾಕಿ
ಜೇನು ತುಪ್ಪ ಇಷ್ಟವಿಲ್ಲದೇ ಇದ್ದರೆ ಸಕ್ಕರೆಯೂ ಹಾಕಬಹುದು
ಬಳಿಕ ಸ್ವಲ್ಪ ಏಲಕ್ಕಿ ಪುಡಿ ಮಾಡಿ ಇದಕ್ಕೆ ಸೇರಿಸಿಕೊಳ್ಳಿ
ಈಗ ಇದನ್ನು ಚೆನ್ನಾಗಿ ಕಲಸಿಕೊಂಡು ಒಂದು ಗಂಟೆ ಕಾಲ ಫ್ರಿಡ್ಜ್ ನಲ್ಲಿಡಿ
ಬಳಿಕ ಹೊರ ತೆಗೆದು ಇದಕ್ಕೆ ತಂಪು ಹಾಲನ್ನು ಸೇರಿಸಿ ಸೇವಿಸಿ