ರುಚಿಯಾದ ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ

ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೆಳ್ಳುಳ್ಳಿ ಉಪ್ಪಿನಕಾಯಿ ಇದ್ದರೆ ತುಪ್ಪ-ಅನ್ನದ ಜೊತೆ ಕಲಸಿಕೊಂಡು ತಿನ್ನಲು ರುಚಿಯಾಗಿರುತ್ತದೆ. ಇದು ಬ್ಯಾಚುಲರ್ ಗಳಿಗೆ ಹೇಳಿ ಮಾಡಿಸಿದ ಐಟಂ. ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಒಂದು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕದೇ ಮೆಂತೆ ಕಾಳುಗಳನ್ನು ಹಾಕಿ ರೋಸ್ಟ್ ಮಾಡಿ

ಮೆಂತೆ ಕಲರ್ ಬದಲಾಗುತ್ತಿದ್ದಂತೇ ಧನಿಯಾ ಹಾಗೂ ಜೀರಿಗೆ ಕಾಳುಗಳನ್ನು ಹಾಕಿ ಫ್ರೈ ಮಾಡಿ

ಈಗ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಟ್ಟುಕೊಳ್ಳಿ

ಈಗ ಅದೇ ಬಾಣಲೆಗೆ ಎಣ್ಣೆ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಡಿ

ಸಾಸಿವೆ ಸಿಡಿದ ನಂತರ ಸಿಪ್ಪೆ ತೆಗೆದು ಎಸಳು ಮಾಡಿಕೊಂಡ ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿ

ಇದರ ಕಲರ್ ಬದಲಾದ ಮೇಲೆ ಹುಣಸೆ ರಸ, ಖಾರದ ಪುಡಿ, ಉಪ್ಪು ಹಾಕಿ ತಿರುವಿ

ಬಳಿಕ ಅರಿಶಿನ ಪುಡಿ ಮತ್ತು ರುಬ್ಬಿದ ಡ್ರೈ ಮಸಾಲೆ ಹಾಕಿ ತಿರುವಿದರೆ ಉಪ್ಪಿನಕಾಯಿ ರೆಡಿ