ಹೋಟೆಲ್ ಶೈಲಿಯಲ್ಲಿ ದ್ರಾಕ್ಷಿ ಜ್ಯೂಸ್ ರೆಸಿಪಿ

ಈ ಬೇಸಿಗೆಯಲ್ಲಿ ತಣ್ಣನೆಯ ಜ್ಯೂಸ್ ಸೇವನೆ ಮಾಡಲು ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ದ್ರಾಕ್ಷಿ ಹೇರಳವಾಗಿ ಸಿಗುತ್ತಿದ್ದು ಹೋಟೆಲ್ ಶೈಲಿಯಲ್ಲಿ ಜ್ಯೂಸ್ ಮಾಡಬಹುದು.

Photo Credit: Instagram

ಮೊದಲಿಗೆ ದ್ರಾಕ್ಷಿಯನ್ನು ಉಪ್ಪು ನೀರಿನಲ್ಲಿ ಹಾಕಿ ತೊಳೆದುಕೊಳ್ಳಿ

ಈಗ ಜ್ಯೂಸ್ ಗೆ ಜಾರ್ ಗೆ ದ್ರಾಕ್ಷಿ, ಐಸ್ ಕ್ಯೂಬ್ ಹಾಕಿಕೊಳ್ಳಿ

ಇದಕ್ಕೆ ನಾಲ್ಕೈದು ಎಲೆಯಷ್ಟು ಫ್ಲೇವರ್ ಗಾಗಿ ಪುದೀನಾ ಸೊಪ್ಪು ಹಾಕಿ

ಬಳಿಕ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ

ಬೀಜ ಇರುವ ದ್ರಾಕ್ಷಿಯಾಗಿದ್ದರೆ ಸೋಸಿಕೊಳ್ಳುವುದು ಕಡ್ಡಾಯ

ಈಗ ಒಂದು ಗ್ಲಾಸ್ ಗೆ ಜ್ಯೂಸ್ ಸುರುವಿಕೊಂಡು ಚಿಟಿಕೆ ಉಪ್ಪು ಹಾಕಿ

ಈ ಜ್ಯೂಸ್ ಬೇಸಿಗೆಯಲ್ಲಿ ದೇಹವನ್ನೂ ತಣ್ಣಗಾಗಿಸುತ್ತದೆ