ಹೋಟೆಲ್ ಶೈಲಿಯ ರೆಡ್ ಚಟ್ನಿ ರೆಸಿಪಿ

ಹೋಟೆಲ್ ನಲ್ಲಿ ಇಡ್ಲಿ ಜೊತೆ ಕೆಲವು ಕಡೆ ಕೆಂಪು ಚಟ್ನಿ ಕೊಡುತ್ತಾರೆ. ಇದೇ ಶೈಲಿಯಲ್ಲಿ ಮನೆಯಲ್ಲಿಯೇ ರೆಡ್ ಚಟ್ನಿ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಶಾಲಟ್ ಈರುಳ್ಳಿ, ದಪ್ಪ ಈರುಳ್ಳಿ, ಬೆಳ್ಳುಳ್ಳಿ ಹಾಕಿ

ಇದಕ್ಕೆ ಕೆಂಪು ಮೆಣಸು, ಶುಂಠಿ ಸೇರಿಸಿ ಫ್ರೈ ಮಾಡಿ

ಈಗ ಇದಕ್ಕೆ ಕಾಯಿತುರಿ ಸೇರಿಸಿ ಫ್ರೈ ಮಾಡಿ

ಈಗ ಇದನ್ನು ಮಿಕ್ಸಿಗೆ ಹಾಕಿ ಉಪ್ಪು, ಪುಟಾಣಿ ಸೇರಿಸಿಕೊಂಡು ರುಬ್ಬಿ

ಇದಕ್ಕೆ ಸಾಸಿವೆ, ಕರಿಬೇವು, ಉದ್ದಿನಬೇಳೆ, ಮೆಣಸು ಒಗ್ಗರಣೆ ಕೊಡಿ

ಇದನ್ನು ಇಡ್ಲಿ ಜೊತೆ ಸೇರಿಸಿಕೊಂಡು ತಿನ್ನಲು ಬಲು ರುಚಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.