ಸಕ್ಕರೆ, ಬೆಲ್ಲ ಬಳಸದೇ ಐಸ್ ಕ್ರೀಂ ಮಾಡುವುದು ಹೇಗೆ

ಸಕ್ಕರೆ ಮತ್ತು ಬೆಲ್ಲ ಬಳಸದೇ ಮಧುಮೇಹಿಗಳೂ ಸೇವಿಸಲು ಯೋಗ್ಯವಾದ ಐಸ್ ಕ್ರೀಂ ಒಂದನ್ನು ಮನೆಯಲ್ಲಿಯೇ ತಯಾರಿಸಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಬೌಲ್ ನಲ್ಲಿ ಬಾದಾಮಿ, ಗೋಡಂಬಿ, ಓಟ್ಸ್ ಹಾಕಿ

ಇದಕ್ಕೆ ಸ್ವಲ್ಪ ಖರ್ಜೂರವನ್ನೂ ಸೇರಿಸಿ

ಈಗ ಇದಕ್ಕೆ ಬಿಸಿ ಹಾಲು ಸೇರಿಸಿ ಮುಚ್ಚಿಡಿ

ಅರ್ಧ ಗಂಟೆ ಬಿಟ್ಟು ತೆಗೆದರೆ ಒಣ ಹಣ್ಣು ಸಂಪೂರ್ಣ ನೆನೆದಿರುತ್ತದೆ

ಈಗ ಇದನ್ನು ಒಂದು ಮಿಕ್ಸಿ ಜಾರ್ ಗೆ ವರ್ಗಾಯಿಸಿ

ಎಲ್ಲವನ್ನೂ ನುಣ್ಣಗೆ ರುಬ್ಬಿಕೊಂಡು ಒಂದು ಬಾಕ್ಸ್ ಗೆ ಹಾಕಿ

ಇದಕ್ಕೆ ಮೇಲಿನಿಂದ ಚಾಕೋ ಚಿಪ್ಸ್ ಉದುರಿಸಿ ಫ್ರೀಝ್ ಮಾಡಿದರೆ ಐಸ್ ಕ್ರೀಂ ರೆಡಿ