ಇಡ್ಲಿ ಮಾಡುವಾಗ ಮೃದುವಾಗಿ ಮಲ್ಲಿಗೆಯಂತಿದ್ದರೆ ಅದನ್ನು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ ಇಡ್ಲಿ ಮೃದುವಾಗಬೇಕಾದರೆ ಅದರ ಪಾಕದ ಅಳತೆ ಸರಿಯಾಗಿರಬೇಕು. ಮೃದುವಾಗಲು ಏನು ಮಾಡಬೇಕು ನೋಡಿ.
Photo Credit: Instagram, WD
ಒಂದು ಕಪ್ ಉದ್ದಿನ ಬೇಳೆ ತೆಗೆದುಕೊಂಡರೆ ಅದಕ್ಕೆ ಎರಡು ಕಪ್ ಇಡ್ಲಿ ಅಕ್ಕಿ ಸೇರಿಸಬೇಕು
ಎರಡನ್ನೂ ಪ್ರತ್ಯೇಕವಾಗಿ ಸುಮಾರು 2 ಗಂಟೆಗಳ ಕಾಲ ನೆನೆ ಹಾಕಬೇಕು
ಉದ್ದು ಎಷ್ಟು ನುಣ್ಣಗೆ ಆಗುತ್ತದೋ ಅಷ್ಟು ರುಬ್ಬಿದರೆ ಇಡ್ಲಿಯ ರುಚಿಯೂ ಹೆಚ್ಚು
ಇಡ್ಲಿ ಅಕ್ಕಿಯನ್ನು ಸಣ್ಣ ರವೆಯಷ್ಟು ತರಿ ತರಿಯಾಗಿ ರುಬ್ಬಿಕೊಳ್ಳಬೇಕು
ಇವೆರಡೂ ಹಿಟ್ಟನ್ನು ಆದಷ್ಟು ಕೈಯಿಂದ ಮೃದುವಾಗಿ ತಿರುವಿ ಕಲಸಿಕೊಳ್ಳಬೇಕು
ಇಡ್ಲಿ ಹಿಟ್ಟಿಗೆ ಸ್ವಲ್ಪ ಅವಲಕ್ಕಿ ಅಥವಾ ಉಳಿದ ಅನ್ನ ಸೇರಿದರೆ ಮತ್ತಷ್ಟು ಮೃದುವಾಗುತ್ತದೆ
ಇಡ್ಲಿ ಹಿಟ್ಟಿಗೆ ಹೆಚ್ಚು ನೀರು ಸೇರಿಸಬಾರದು ಮತ್ತು ಅತಿಯಾಗಿ ಹುಳಿ ಬಾರದಂತೆ ನೋಡಿಕೊಂಡರೆ ಸಾಕು