ಕಲರ್ ಫುಲ್ ದಿಡೀರ್ ದೋಸೆ ರೆಸಿಪಿ

ಮಕ್ಕಳು ದೋಸೆ ಎಂದರೆ ಮೂಗು ಮುರಿಯುತ್ತಾರೆ. ಮಕ್ಕಳಿಗೂ ಇಷ್ಟವಾಗಬೇಕು, ಆರೋಗ್ಯಕರವಾಗಿಯೂ ಇರಬೇಕು ಎಂದರೆ ಬೀಟ್ ರೂಟ್, ಓಟ್ಸ್ ಸೇರಿಸಿ ದೋಸೆ ಮಾಡಿ.

Photo Credit: Instagram

ಒಂದು ಬೌಲ್ ಗೆ ಓಟ್ಸ್, ಹೆಸರು ಬೇಳೆ, ಮಸೂರ್ ದಾಲ್ ಹಾಕಿ

ಇದಕ್ಕೆ ಬೀಟ್ ರೂಟ್ ಪೀಸ್, ಶುಂಠಿ, ಹಸಿಮೆಣಸಿನಕಾಯಿ ಸೇರಿಸಿ

ಈಗ ಇವುಗಳನ್ನು ನೀರು ಹಾಕಿ ಅರ್ಧಗಂಟೆ ನೆನೆಸಿಡಿ

ಬಳಿಕ ಮಿಕ್ಸಿ ಜಾರ್ ಗೆ ಹಾಕಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಒಂದು ತವಾ ಕಾದ ಮೇಲೆ ಸ್ವಲ್ಪ ಎಣ್ಣೆ ಸವರಿ

ಬಳಿಕ ದೋಸೆ ಹುಯ್ದುಕೊಂಡು ಎರಡೂ ಬದಿ ಬೇಯಿಸಿದರೆ ಬೀಟ್ ರೂಟ್ ದೋಸೆ ರೆಡಿ

ಗಮನಿಸಿ: ಈ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.