ಕಬ್ಬಿಣದ ತವ ಹದಕ್ಕೆ ತರಲು ಟಿಪ್ಸ್

ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ನಾನ್ ಸ್ಟಿಕ್ ತವ ಬಳಸುವವರೇ ಹೆಚ್ಚು. ಆದರೆ ದೋಸೆ ಮಾಡಲು ಕಬ್ಬಿಣದ ತವ ಅತ್ಯಂತ ಯೋಗ್ಯವಾಗಿದೆ. ಆದರೆ ಇದನ್ನು ಬಳಸುವ ಮೊದಲು ಹದಕ್ಕೆ ತರಬೇಕು. ಕಬ್ಬಿಣದ ತವ ಹದಕ್ಕೆ ತರಲು ಇಲ್ಲಿದೆ ಟಿಪ್ಸ್.

Photo Credit: Social Media

ದೋಸೆ ಕಾವಲಿಯನ್ನು ಮನೆಗೆ ತಂದ ತಕ್ಷಣ ಸಾಮಾನ್ಯ ಡಿಶ್ ವಾಶ್ ಬಳಸಿ ಸ್ಕ್ರಬರ್ ನಿಂದ ಚೆನ್ನಾಗಿ ತೊಳೆಯಿರಿ

ನಂತರ ಅದನ್ನು ಮೃದುವಾದ ಬಟ್ಟೆಯಿಂದ ಒರೆಸಿ ನೀರಿನಂಶ ತೆಗೆದ ಬಳಿಕ ಎಣ್ಣೆ ಹಚ್ಚಿಡಿ

ಸುಮಾರು ಒಂದು ದಿನ ಅಥವಾ ಅರ್ಧ ದಿನದವರೆಗೆ ಈ ರೀತಿ ಎಣ್ಣೆ ಹಚ್ಚಿ ಬಿಟ್ಟು ಬಿಡಿ

ಬಳಿಕ ದೋಸೆ ಕಾವಲಿಯನ್ನು ಮಧ್ಯಮ ಉರಿಯಲ್ಲಿಟ್ಟು ಬಿಸಿ ಮಾಡಿಕೊಳ್ಳಿ

ಸಂಪೂರ್ಣ ತಣ್ಣಗಾದ ಬಳಿಕ ತವ ಮೇಲೆ ಮತ್ತೆ ಎಣ್ಣೆ ಹಚ್ಚಿ ಒಣಗಿರುವ ಸ್ಥಳದಲ್ಲಿ ಇಡಿ

ಇದೇ ರೀತಿ ಮೂರರಿಂದ ನಾಲ್ಕು ಬಾರಿ ಎಣ್ಣೆ ಹಚ್ಚಿ ಬಿಟ್ಟು ಮಾಡುತ್ತಿದ್ದರೆ ತವ ರೆಡಿಯಾಗುತ್ತದೆ

ಇದರ ಬದಲು ಗಂಜಿ ಅಥವಾ ಅಕ್ಕಿ ನೀರು ಬಳಸಿಯೂ ಸ್ವಚ್ಛಗೊಳಿಸಬಹುದು