ಫಟಾಪಟ್ ಆಗಿ ತೊಂಡೆಕಾಯಿ ಬಜ್ಜಿ ಮಾಡುವ ವಿಧಾನ

ತೊಂಡೆಕಾಯಿ ಪಲ್ಯ, ಸಾಂಬಾರ್ ಕೇಳಿರುತ್ತೀರಿ. ಆದರೆ ತೊಂಡೆಕಾಯಿ ಬಳಸಿಕೊಂಡು ಖಾರ ಖಾರವಾಗಿ ಫಟಾಪಟ್ ಆಗಿ ಬಜ್ಜಿ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಮೊದಲು ತೊಂಡೆಕಾಯಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ

ಇದನ್ನು ಉದ್ದ ಉದ್ದಕ್ಕೆ ಸೀಳಿಟ್ಟುಕೊಂಡು ಸ್ವಲ್ಪವೇ ಉಪ್ಪು ಬೆರೆಸಿ

ಈಗ ಒಂದು ಬೌಲ್ ನಲ್ಲಿ ಕಡಲೆಹಿಟ್ಟು, ಉಪ್ಪು, ಖಾರದಪುಡಿ ಹಾಕಿ

ಇದಕ್ಕೆ ಸ್ವಲ್ಪ ಜೀರಿಗೆ, ಇಂಗು, ಅರಿಶಿನ ಹಾಕಿ ನೀರು ಹಾಕದೇ ಮಿಕ್ಸ್ ಮಾಡಿ

ತೊಂಡೆಕಾಯಿಯಲ್ಲಿ ನೀರಿನಂಶವಿರುವ ಕಾರಣ ಈ ಮಿಶ್ರಣಕ್ಕೆ ಹಾಗೆಯೇ ಅದ್ದಿಕೊಳ್ಳಿ

ಬಳಿಕ ಇದನ್ನು ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿದರೆ ಬಜ್ಜಿ ಸಿದ್ಧವಾಗುತ್ತದೆ.

ಗಮನಿಸಿ: ಈ ಪಾಕ ವಿಧಾನ ಹಲವು ಮೂಲಗಳನ್ನು ಆಧರಿಸಿದ್ದಾಗಿದೆ.