ಸಕ್ಕರೆ ಹಾಕದೇ ನೇರಳೆ ಹಣ್ಣಿನ ಜ್ಯೂಸ್ ಮಾಡುವ ವಿಧಾನ

ಈಗ ನೇರಳೆ ಹಣ್ಣಿನ ಸೀಸನ್. ಈ ಹಣ್ಣು ಮಧುಮೇಹಿಗಳಿಗಂತೂ ತುಂಬಾ ಒಳ್ಳೆಯದು. ಇದಕ್ಕೆ ಸಕ್ಕರೆ ಹಾಕದೇ ಆರೋಗ್ಯಕರ ಜ್ಯೂಸ್ ಮಾಡುವುದು ಹೇಗೆ ನೋಡಿ.

Photo Credit: Instagram

ನೇರಳೆ ಹಣ್ಣುಗಳನ್ನು ತೆಗೆದುಕೊಂಡು ಬೀಜ ತೆಗೆದು ಹೆಚ್ಚಿಕೊಳ್ಳಿ

ಇದನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿ

ಇದಕ್ಕೆ ಸ್ವಲ್ಪ ಉಪ್ಪು, ಪುದೀನಾ ಸೇರಿಸಿಕೊಳ್ಳಿ

ಬಳಿಕ ಚ್ಯಾಟ್ ಮಸಾಲ, ಚಿಟಿಕೆ ಖಾರದಪುಡಿ, ನಿಂಬೆ ರಸ ಹಾಕಿಕೊಳ್ಳಿ

ಈಗ ಇದನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿ

ಈಗ ಇದಕ್ಕೆ ಬೇಕಾದಷ್ಟು ನೀರು ಸೇರಿಸಿಕೊಂಡು ಲೋಟಕ್ಕೆ ಸುರಿದರೆ ಜ್ಯೂಸ್ ರೆಡಿ

ಗಮನಿಸಿ: ಈ ವಿಧಾನ ಕೇವಲ ಮಾಹಿತಿಗಾಗಿ ಮಾತ್ರ