ಕಾಜು ಕಟ್ಲಿ ಸುಲಭವಾಗಿ ಹೀಗೆ ಮಾಡಬಹುದು

ದೀಪಾವಳಿ ಹಬ್ಬ ಬಂತೆಂದರೆ ಬರ್ಫಿ, ಜಿಲೇಬಿ, ಲಡ್ಡು ಎಂದು ಸಿಹಿ ತಿಂಡಿಗಳೇ ನೆನಪಾಗುವುದು. ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಸುಲಭವಾಗಿ ಕಾಜು ಕಟ್ಲಿ ಮಾಡುವುದು ಹೇಗೆ ಎಂದು ಇಲ್ಲಿದೆ ರೆಸಿಪಿ ನೋಡಿ.

Photo Credit: Instagram

ಮೊದಲಿಗೆ ಒಂದು ಬಟ್ಟಲಿನಷ್ಟು ಶುದ್ಧವಾದ ಗೋಡಂಬಿಗಳನ್ನು ತೆಗೆದುಕೊಳ್ಳಿ

ಇದನ್ನು ಒಂದು ಮಿಕ್ಸಿ ಜಾರಿಗೆ ನೀರು ಹಾಕದೇ ರುಬ್ಬಿ ನುಣ್ಣಗೆ ಪುಡಿ ಮಾಡಿಕೊಳ್ಳಿ

ಈಗ ಒಂದು ಪಾತ್ರೆಗೆ ಎರಡರಷ್ಟು ಸಕ್ಕರೆ ಮತ್ತು ಅರ್ಧ ಲೋಟದಷ್ಟು ನೀರು ಹಾಕಿ ಪಾಕ ಮಾಡಿ

ಈ ಸಕ್ಕರೆ ಪಾಕ ಒಂದೆಳೆ ನೂಲು ಪಾಕ ಆಗುವಷ್ಟು ಕುದಿಸಿಕೊಂಡು ಕೆಳಗಿಳಿಸಿ

ಇದಕ್ಕೆ ಪುಡಿ ಮಾಡಿದ ಗೋಡಂಬಿಯನ್ನು ಹಾಕಿ ಚೆನ್ನಾಗಿ ಗಂಟುಗಳಾಗದಂತೆ ಮಿಕ್ಸ್ ಮಾಡಿ

ಬಳಿಕ ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನೂ ಸೇರಿಸಿ ಹದ ಉರಿಯಲ್ಲಿ ತಿರುವುತ್ತಾ ಇರಬೇಕು

ಇದು ಹಲ್ವಾದಂತೆ ಗಟ್ಟಿಯಾದ ಬಳಿಕ ಕೆಳಗಿಳಿಸಿ ಒಂದು ಶೀಟ್ ಗೆ ಹಾಕಿ ಅದನ್ನು ಹರಡಿ ಕಟ್ ಮಾಡಿಕೊಳ್ಳಿ