Spicy food day: ಕೇರಳ ಶೈಲಿಯ ಪುಳಿಂಜಿ ರೆಸಿಪಿ

ಊಟದ ಜೊತೆಗೆ ಸ್ವಲ್ಪ ಖಾರ, ಹುಳಿ, ಸಿಹಿ ಮಿಶ್ರಿತ ಗೊಜ್ಜು ಸೇರಿಸಿ ತಿನ್ನಬೇಕೆಂದರೆ ಕೇರಳ ಶೈಲಿಯ ಪುಳಿಂಜಿ ಬೆಸ್ಟ್ ರೆಸಿಪಿ. ಇದನ್ನು ಮಾಡುವುದು ಹೇಗೆ ಇಲ್ಲಿ ನೋಡಿ.

Photo Credit: Instagram

ಮೊದಲು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ

ಇದನ್ನು ಫ್ರೈ ಮಾಡಿದ ಬಳಿಕ ಚಿಕ್ಕದಾಗಿ ಹೆಚ್ಚಿಟ್ಟ ಶುಂಠಿ, ಹಸಿಮೆಣಸು ಸೇರಿಸಿ

ಇದು ಹೊಂಬಣ್ಣ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು

ಬಳಿಕ ಇದಕ್ಕೆ ಸ್ವಲ್ಪ ಅರಿಶಿನ, ಮೆಣಸಿನ ಹುಡಿ, ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದು ಫ್ರೈ ಆದ ಬಳಿಕ ಇದಕ್ಕೆ ಸ್ವಲ್ಪ ಹುಣಸೆ ಹುಳಿ ನೀರು ಹಾಕಿ ಒಂದು ಕುದಿಸಿ

ಇದು ಚೆನ್ನಾಗಿ ಕುದಿಯುವಾಗ ಸ್ವಲ್ಪ ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ

ಕುದಿ ಬಂದ ಮೇಲೆ ಮೇಲಿನಿಂದ ಸ್ವಲ್ಪ ಇಂಗು ಪುಡಿ ಸೇರಿಸಿದರೆ ಪುಳಿಂಜಿ ರೆಡಿ