ಸ್ಕಂದ ಮಾತಾ ದೇವಿಗೆ ಕೇಸರಿ ಖೀರು ಮಾಡಿ

ಇಂದು ನವರಾತ್ರಿಯ ಐದನೇ ದಿನವಾಗಿದ್ದು ಸ್ಕಂದ ಮಾತಾ ದೇವಿಗೆ ಕೇಸರಿ ಖೀರಿನ ನೈವೇದ್ಯ ಮಾಡುವುದು ವಿಶೇಷ. ಕೇಸರಿ ಖೀರು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಒಂದು ಬಾಣಲೆಯಲ್ಲಿ ಒಂದು ಲೀಟರ್ ಆಗುವಷ್ಟು ಹಾಲು ಹಾಕಿ

ಇದು ಚೆನ್ನಾಗಿ ಕುದಿಯುವಾಗ ತೊಳೆದ ಬೆಳ್ತಿಗೆ ಅಕ್ಕಿಯನ್ನು ಹಾಕಿ

ಇದು ಸ್ವಲ್ಪ ಬೆಂದ ಮೇಲೆ ಗೋಡಂಬಿ, ದ್ರಾಕ್ಷಿ ಹಾಕಿ

ಬಳಿಕ ಸ್ವಲ್ಪ ಕೇಸರಿ ಮತ್ತು ಏಲಕ್ಕಿ ಪೌಡರ್ ಮಿಕ್ಸ್ ಮಾಡಿ

ಅಕ್ಕಿ ಬೆಂದ ಮೇಲೆ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ

ಈಗ ಮೇಲಿನಿಂದ ಸ್ವಲ್ಪ ಬಾದಾಮಿ, ಪಿಸ್ತಾ ಪುಡಿ ಹಾಕಿದರೆ ಖೀರು ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.