ರುಚಿಕರ ಮಜ್ಜಿಗೆ ಸಾರು ಮಾಡಿ

ಮಜ್ಜಿಗೆ ಹಾಗೇ ಸೇವನೆ ಮಾಡಲು ಇಷ್ಟವಾಗುತ್ತದೆ. ಆದರೆ ಇದರಿಂದ ಸಾರು ಕೂಡಾ ಮಾಡಬಹುದು. ರುಚಿಕರ ಮಜ್ಜಿಗೆ ಸಾರು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಮೊದಲು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಹಾಕಿ ಫ್ರೈ ಮಾಡಿ

ಇದು ಫ್ರೈ ಆದ ಮೇಲೆ ಸ್ವಲ್ಪ ಕಡಲೆ ಬೇಳೆ, ಒಣಮೆಣಸು, ಕರಿಬೇವು ಹಾಕಿ

ಈಗ ಜಜ್ಜಿದ ನಾಲ್ಕೈದು ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ

ಇವುಗಳನ್ನು ಫ್ರೈ ಮಾಡುವಾಗ ಚಿಟಿಕೆ ಅರಿಶಿನ, ಉಪ್ಪು ಸೇರಿಸಿ

ಇವುಗಳು ಚೆನ್ನಾಗಿ ಫ್ರೈ ಆದ ಬಳಿಕ ಸ್ವಲ್ಪ ಇಂಗು, ಶುಂಠಿ ಪೇಸ್ಟ್ ಸೇರಿಸಿ

ಎಲ್ಲವೂ ಚೆನ್ನಾಗಿ ಮಿಶ್ರಣವಾದ ಬಳಿಕ ಸ್ಟವ್ ಆಫ್ ಮಾಡಿ ಮಜ್ಜಿಗೆ ಸೇರಿಸಿ

ಈ ಸಾರನ್ನು ಅನ್ನಕ್ಕೆ ಸೇರಿಸಿ ಅಥವಾ ಹಾಗೆಯೇ ಸೇವನೆ ಮಾಡಬಹುದು