ಉಳಿದ ಇಡ್ಲಿ ಇದ್ದರೆ ಹೀಗೊಂದು ತಿಂಡಿ ಮಾಡಿ

ಇಡ್ಲಿ ಮಾಡಿದ್ದು ಉಳಿದರೆ ಅದನ್ನು ಯಾರೂ ತಿನ್ನುವವರಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ಅದನ್ನು ಬಳಸಿ ಹೊಸದೊಂದು ಮಸಾಲಾ ತಿಂಡಿ ರೆಡಿ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಮೊದಲು ಇಡ್ಲಿಯನ್ನು ಚಾಕುವಿನಿಂದ ಹೋಳು ಮಾಡಿಕೊಳ್ಳಿ

ಈಗ ಇದನ್ನು ಬಾಣಲೆಯಲ್ಲಿ ಸ್ವಲ್ಪವೇ ಎಣ್ಣೆ ಹಾಕಿ ಫ್ರೈ ಮಾಡಿ

ಇನ್ನೊಂದು ಬಾಣಲೆಗೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ

ಇದಕ್ಕೆ ಈರುಳ್ಳಿ, ಧನಿಯಾ ಪೌಡರ್, ಗರಂ ಮಸಾಲೆ ಸೇರಿಸಿ

ಬಳಿಕ ಟೊಮೆಟೊ, ಉಪ್ಪು, ಖಾರದ ಪುಡಿ, ಅರಿಶಿನ ಸೇರಿಸಿ ಫ್ರೈ ಮಾಡಿ

ಫ್ರೈ ಆದ ಬಳಿಕ ಸ್ವಲ್ಪವೇ ನೀರು ಹಾಕಿ ಟೊಮೆಟೊ ಮೆತ್ತಗಾಗುವಂತೆ ಬೇಯಿಸಿ

ಈಗ ಇದಕ್ಕೆ ಫ್ರೈ ಮಾಡಿಟ್ಟ ಇಡ್ಲಿ ಸೇರಿಸಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಕಿ