ಮೆಂತ್ಯ ಸೊಪ್ಪಿನ ಚಪಾತಿ ತಿಂದಿದ್ದೀರಾ

ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಅತ್ಯುತ್ತಮ. ಇದನ್ನು ಬಳಸಿ ಪುಲಾವ್, ಪಲ್ಯ, ಸಾಂಬಾರ್ ಮಾಡುವಂತೆ ಚಪಾತಿಗೂ ಹಾಕಿ ಟೇಸ್ಟಿಯಾಗಿ ಮಾಡಬಹುದು. ಇಲ್ಲಿದೆ ರೆಸಿಪಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಸಾಸಿವೆ ಒಗ್ಗರಣೆ ಕೊಡಿ

ಇದಕ್ಕೆ ಮೆಂತ್ಯ ಸೊಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಈಗ ಇದಕ್ಕೆ ಅರಿಶಿನ, ಉಪ್ಪು, ಖಾರದಪುಡಿ ಸೇರಿಸಿ

ಈ ಮಿಶ್ರಣಕ್ಕೆ ಗೋಧಿ ಹಿಟ್ಟು, ನೀರು ಹಾಕಿ ಚೆನ್ನಾಗಿ ಕಲಸಿ

ಇದನ್ನು ಉಂಡೆ ಕಟ್ಟಿ ಚಪಾತಿಯಂತೆ ಲಟ್ಟಿಸಿಕೊಳ್ಳಿ

ಬಳಿಕ ಬಾಣಲೆಯಲ್ಲಿ ಎರಡೂ ಬದಿ ಬೇಯಿಸಿದರೆ ಚಪಾತಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.