ಮೆಂತ್ಯ ಸೊಪ್ಪು ಹೆಸರು ಬೇಳೆ ಪಲ್ಯ ರೆಸಿಪಿ

ಮೆಂತ್ಯ ಸೊಪ್ಪು ಮತ್ತು ಹೆಸರು ಬೇಳೆ ಸೇರಿಸಿ ಮಾಡುವ ರುಚಿಕರ ಪಲ್ಯದ ರೆಸಿಪಿ ಇಲ್ಲಿದೆ. ಇದು ರೋಟಿ, ಚಪಾತಿಗೆ ಬೆಸ್ಟ್ ಕಾಂಬಿನೇಷನ್.

Photo Credit: Instagram

ಚಿಕ್ಕದಾಗಿ ಹೆಚ್ಚಿದ ಮೆಂತ್ಯ ಸೊಪ್ಪು, ನೆನೆಸಿದ ಹೆಸರು ಬೇಳೆ ಇಟ್ಟುಕೊಳ್ಳಿ

ನೆಲಗಡಲೆ, ಕಾಯಿತುರಿ, ಬೆಳ್ಳುಳ್ಳಿ,ಧನಿಯಾ, ಉದ್ದಿನಬೇಳೆ ಫ್ರೈ ಮಾಡಿ ಪೌಡರ್ ಮಾಡಿ

ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ ಒಗ್ಗರಣೆ, ಈರುಳ್ಳಿ, ಟೊಮೆಟೊ ಹಾಕಿ ಫ್ರೈ ಮಾಡಿ

ಇದಕ್ಕೆ ರುಚಿಗೆ ತಕ್ಕ ಉಪ್ಪು, ಅರಿಶಿನ, ಗರಂ ಮಸಾಲೆ, ಖಾರದಪುಡಿ ಸೇರಿಸಿ

ಇದು ಬೆಂದ ಬಳಿಕ ಮೆಂತ್ಯ ಸೊಪ್ಪು, ಹೆಸರು ಬೇಳೆ, ಮಸಾಲೆ ಪೌಡರ್ ಸೇರಿಸಿ

ಇದು ಚೆನ್ನಾಗಿ ಬೆಂದ ಬಳಿಕ ಕೊನೆಯಲ್ಲಿ ತುಪ್ಪ ಸೇರಿಸಿದರೆ ಪಲ್ಯ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.