ಬಿಸ್ಕತ್ ಬಳಸಿ ಮಿಲ್ಕ್ ಶೇಕ್ ಮಾಡಿ

ಚಾಕಲೇಟ್ ಫ್ಲೇವರ್ ಬಿಸ್ಕತ್ ಇದ್ದಲ್ಲಿ ಅದರಿಂದ ರುಚಿಕರವಾದ ಮಿಲ್ಕ್ ಶೇಕ್ ತಯಾರಿಸಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram

ಮೊದಲಿಗೆ ಚಾಕಲೇಟ್ ಫ್ಲೇವರ್ ನ ಕ್ರೀಂ ಬಿಸ್ಕತ್ ನ್ನು ಚಿಕ್ಕದಾಗಿ ಕತ್ತರಿಸಿ

ಈಗ ಒಂದು ಬೌಲ್ ನಷ್ಟು ಕುದಿಸಿದ ಹಾಲನ್ನು ತಣ್ಣಗಾಗಲು ಬಿಡಿ

ಮಿಕ್ಸಿಗೆ ಬಿಸ್ಕತ್ ಪುಡಿ, ಹಾಲು, ಎರಡು ಸ್ಪೂನ್ ಸಕ್ಕರೆ ಹಾಕಿ

ಬಳಿಕ ಇದಕ್ಕೆ ನಾಲ್ಕೈದು ಐಸ್ ಕ್ಯೂಬ್, ಏಲಕ್ಕಿ ಬೇಕಿದ್ದಲ್ಲಿ ಸೇರಿಸಿ

ಕ್ಯಾಡ್ ಬರೀಸ್ ಚಾಕ್ಲೇಟ್ ಇದ್ದಲ್ಲಿ ಅದನ್ನೂ ಸೇರಿಸಿಕೊಳ್ಳಬಹುದು

ಇವಿಷ್ಟನ್ನೂ ನುಣ್ಣಗಾಗುವಂತೆ ರುಬ್ಬಿಕೊಳ್ಳಿ

ಲೋಟಕ್ಕೆ ಸುರುವಿಕೊಂಡು ಮೇಲೆ ಬಿಸ್ಕತ್ ಪುಡಿ ಉದುರಿಸಿಕೊಂಡು ಸವಿಯಿರಿ