ಗಣೇಶನ ಹಬ್ಬಕ್ಕೆ ಮುಖ್ಯವಾಗಿ ಮಾಡಬೇಕಾಗುವ ತಿಂಡಿ ಎಂದರೆ ಅದು ಮೋದಕ. ಗಣೇಶನನ್ನು ಮೋದಕ ಪ್ರಿಯ ಎಂದೂ ಕರೆಯಲಾಗುತ್ತದೆ. ಹಾಗಿದ್ದರೆ ಗಣೇಶ ಹಬ್ಬಕ್ಕೆ ಸುಲಭವಾಗಿ ಮೋದಕ ಮಾಡುವ ಬಗೆ ಹೇಗೆ ಇಲ್ಲಿ ನೋಡಿ.
Photo Credit: Instagram
ಮೈದಾ ಹಿಟ್ಟು, ಚಿರೋಟಿ ರವೆ, ಬೆಲ್ಲ, ಕೊಬ್ಬರಿ ತುರಿ, ಹುರಿಕಡಲೆ, ಏಲಕ್ಕಿ, ಎಣ್ಣೆ ಬೇಕಾಗುವ ಸಾಮಗ್ರಿಗಳು
ಮೊದಲು ಒಂದು ಬಾಲ್ ಗೆ ಮೈದಾ, ಚಿರೋಟಿ ರವೆ, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ
ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ರೆಡಿ ಮಾಡಿ
ಒಂದು ಮಿಕ್ಸಿ ಜಾರಿಗೆ ಹುರಿಗಡಲೆ, ಏಲಕ್ಕಿ ಹಾಕಿಕೊಂಡು ನುಣ್ಣಗೆ ರುಬ್ಬಿ
ಇದಕ್ಕೆ ಬಳಿಕ ಸ್ವಲ್ಪ ಬೆಲ್ಲ, ಒಣ ಕೊಬ್ಬರಿ ಹಾಕಿಕೊಂಡು ಇನ್ನೊಂದು ಸುತ್ತ ರುಬ್ಬಿಕೊಳ್ಳಿ
ಒಂದು ಚಪಾತಿ ಮಣೆಯಲ್ಲಿ ಕಲಸಿಟ್ಟ ಮೈದಾ, ಚಿರೋಟಿ ಹಿಟ್ಟನ್ನು ಚಾಪತಿಯಂತೆ ಲಟ್ಟಿಸಿ
ಇದರ ಮಧ್ಯದಲ್ಲಿ ಈಗಾಗಲೇ ತಯಾರಿ ಮಾಡಿರುವ ಹೂರಣವಿಟ್ಟು ಪ್ಯಾಕ್ ಮಾಡಿ ಎಣ್ಣೆಯಲ್ಲಿ ಕರಿದರೆ ಸಾಕು