ನುಗ್ಗೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ

ನುಗ್ಗೆ ಸೊಪ್ಪಿನ ಗಟ್ಟಿ ಚಟ್ನಿ ಇದ್ದರೆ ಸ್ವಲ್ಪ ತುಪ್ಪ ಹಾಕಿ ಬಿಸಿ ಅನ್ನಕ್ಕೆ ಕಲಸಿಕೊಂಡು ತಿಂದರೆ ಸಖತ್ ಟೇಸ್ಟಿಯಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಮೊದಲು ನುಗ್ಗೆ ಸೊಪ್ಪನ್ನು ತೊಳೆದು ಸೊಪ್ಪು ಬಿಡಿಸಿಟ್ಟುಕೊಳ್ಳಿ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಿನಬೇಳೆ ಹಾಕಿ

ಇದಕ್ಕೆ ಹಸಿಮೆಣಸು, ಕೆಂಪು ಮೆಣಸು, ಬೆಳ್ಳುಳ್ಳಿ, ಚಿಕ್ಕ ಈರುಳ್ಳಿ ಸೇರಿಸಿ

ಇದು ಫ್ರೈ ಆದ ಮೇಲೆ ನುಗ್ಗೆ ಸೊಪ್ಪು ಹಾಕಿ ಫ್ರೈ ಮಾಡಿ

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಉಪ್ಪು, ಹುಳಿ, ಕಾಯಿತುರಿ ಸೇರಿಸಿ

ಇದೆಲ್ಲವನ್ನೂ ನುಣ್ಣಗೆ ನೀರು ಹಾಕದೇ ರುಬ್ಬಿದರೆ ಚಟ್ನಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.