ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಹೇಗೆ ಮಾಡೋದು ಗೊತ್ತಾ

ಕರಿಬೇವಿನ ಚಟ್ನಿಪುಡಿಯಂತೆ ನುಗ್ಗೆ ಸೊಪ್ಪು ಬಳಸಿ ಆರೋಗ್ಯಕರವಾಗಿ ಚಟ್ನಿಪುಡಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಬಾಣಲೆಗೆ ಕಡಲೆಬೇಳೆ, ಉದ್ದಿನಬೇಳೆ, ನೆಲಗಡಲೆ, ಜೀರಿಗೆ ಹಾಕಿ

ಕೊಂಚ ಫ್ರೈ ಆದ ಮೇಲೆ ಧನಿಯಾ, ಕೆಂಪುಮೆಣಸು ಸೇರಿಸಿ ಪಕ್ಕಕ್ಕಿಡಿ

ಇದನ್ನು ಮಿಕ್ಸಿ ಜಾರಿಗೆ ಹಾಕಿ ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ

ಬಾಣಲೆಗೆ ಕರಿಬೇವು, ನುಗ್ಗೆ ಸೊಪ್ಪು, ಹುಣಸೆ ಹುಳಿ ಹಾಕಿ ಫ್ರೈ ಮಾಡಿ

ಇದನ್ನು ರುಬ್ಬಿದ ಮಸಾಲೆ ಜೊತೆ ಸೇರಿಸಿ ಪುಡಿ ಮಾಡಿಕೊಳ್ಳಿ

ಇದಕ್ಕೆ ರುಚಿಗೆ ತಕ್ಕ ಉಪ್ಪು ಸೇರಿಸಿಕೊಂಡರೆ ಚಟ್ನಿಪುಡಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.